ದೇಣಿಗೆ ದಂಗಲ್..! : ಕುಮಾರಸ್ವಾಮಿ ಹೇಳಿಕೆಗೆ ಸಿಟಿ ರವಿ, ಶ್ರೀರಾಮುಲು, ಮುತಾಲಿಕ್ ತಿರುಗೇಟು!

ರಾಮಮಂದಿರ ನಿರ್ಮಾಣಕ್ಕೆ ಆರ್ಎಸ್ಎಸ್ ದೇಣಿಗೆ ಸಂಗ್ರಹದ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಆರ್ಎಸ್ಎಸ್ ದೇಣಿಗೆ ಕೊಡದವರ ಮನೆಗಳಿಗೆ ಸ್ಟಿಕ್ಕರ್ ಹಚ್ಚುತ್ತಿದ್ದಾರೆ” ಕುಮಾರಸ್ವಾಮಿ ಹೇಳಿಕೆಗೆ ಸಿಟಿ ರವಿ, ಶ್ರೀರಾಮುಲು, ಪ್ರಮೋದ್ ಮುತಾಲಿಕ್, ಎಂಪಿ ರೇಣುಕಾಚಾರ್ಯ ತಿರುಗೇಟು ಕೊಟ್ಟಿದ್ದಾರೆ.

ನಿನ್ನೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ” ಆರ್ಎಸ್ ಎಸ್ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡದವರ ಮನೆಗಳಿಗೆ ಮಾರ್ಕ್ ಮಾಡಲಾಗುತ್ತಿದೆ. ಯಾಕೆ ಮಾರ್ಕ್ ಮಾಡ್ತಾಯಿದ್ದಾರೆ ಗೊತ್ತಿಲ್ಲ. ನನಗಿರುವ ಮಾಹಿತಿ ಇದು. ಹಿಂದೆ ಹಿಟ್ಲರ್ ಕಾಲದಲ್ಲಿ ಮಾರ್ಕ್ ಮಾಡಿದ್ರು. ಹೀಗೆ ಮಾರ್ಕ್ ಮಾಡಿ ನಾಜಿಗಳಿಗೆ ಯಹೊದಿಗಳಿಗೆ ಸಂಘರ್ಷ ನಡೆದು ಅವತ್ತು ಲಕ್ಷಾಂತರ ಮಂದಿಯ ಹತ್ಯೆ ಕಾಂಡ ನಡೆಯಿತು” ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ” ಮನಸ್ಸಿಗೆ ಮೊಳೆ ಹೊಡೆಯುವಂತಹ ಕೆಲಸ ಮಾಡಬಾರದು. ಎಲ್ಲರೂ ದೇಣಿಗೆ ನೀಡುತ್ತಿದ್ದಾರೆ. ದೇಣಿಗೆ ಭಕ್ತಿಯಿಂದ ಕೊಡಬೇಕು. ದಬ್ಬಾಳಿಕೆಯಿಂದಲ್ಲ. ಕುಮಾರಸ್ವಾಮಿಯವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಸಣ್ಣ ಮಟ್ಟದಲ್ಲಿ ಯೋಚನೆ ಮಾಡಬಾರದು. ಯಾರ ಮನೆಗೆ ಮೊಳೆ ಹೊಡೆದಿದ್ದಾರೆ ತೋರಿಸಲಿ. ಹೀಗೆ ಮಾತನಾಡುವುದು ಅವರ ಘನೆತೆಗೆ ಗೌರವ ತರುವ ಸಂಗತಿಯಲ್ಲ” ಎಂದು ತಿರುಗೇಟು ಕೊಟ್ಟಿದ್ದಾರೆ.

ರಾಮಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಬೇಡ ಎಂದು ಶ್ರೀರಾಮುಲು ಹೇಳಿದ್ದಾರೆ. “ನಮ್ಮ ಸರ್ಕಾರದಲ್ಲಿ ಹಿಟ್ಲರ್ ಆಡಳಿತ ಬಂದಿಲ್ಲ. ಬರೋದು ಇಲ್ಲ.ಶ್ರೀರಾಮುಲು ಇದೆ. ಕುಮಾರಸ್ವಾಮಿ ಕೂಡ ಹಣ ಕೊಡಬಹುದು. ಪ್ರಚಾರಕ್ಕಾಗಿ ಆಧಾರ ರಹಿತ ಹೇಳಿಕೆ ಕೊಟ್ಟಿದ್ದಾರೆ. ಜೆಡಿಎಸ್ ಶಾಸಕರು, ಅಲ್ಪಸಂಖ್ಯಾತರೂ ಹಣ ಕೊಟ್ಟಿದ್ದಾರೆ ” ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ, ಎಂಪಿ ರೇಣುಕಾಚಾರ್ಯರು “ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ತಾವು ದೇಣಿಗೆ ಕೊಡಲಿ. ತಪ್ಪು ಕಲ್ಪನೆ ಬೇಡ” ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಮೋದ್ ಮುತಾಲಿಕ್ ಮಾತನಾಡಿ, “ಆರ್ಎಸ್ಎಸ್ ಮೇಲೆ ದೊಡ್ಡ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಕ್ಷಮೆ ಕೇಳ್ಬೇಕು” ಗರಂ ಆಗಿದ್ದಾರೆ.

ಇನ್ನೂ ಈ ವಿಚಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು, “ರಾಮನ ಲೆಕ್ಕ ಕೃಷ್ಣನ ಲೆಕ್ಕ ಇದು” ಎಂದು ವ್ಯಂಗ್ಯವಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights