ವೀಡಿಯೊ ಕಾನ್ಫರೆನ್ಸ್ ಕರೆಯಲ್ಲಿ ಪತಿಗೆ ಚುಂಬಿಸಲು ಪ್ರಯತ್ನಿಸಿದ ಪತ್ನಿ : ವೀಡಿಯೋ ವೈರಲ್!
ವೀಡಿಯೋ ಝೂಮ್ ಕರೆಯ ಸಮಯದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಚುಂಬಿಸಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಣ್ಣ ಕ್ಲಿಪ್ನಲ್ಲಿ ವ್ಯಕ್ತಿ ಜಿಡಿಪಿ ಬಗ್ಗೆ ಹೆಡ್ಫೋನ್ಗಳೊಂದಿಗೆ ಮಾತನಾಡುತ್ತಿರುತ್ತಾನೆ. ಹೆಂಡತಿ ಕೋಣೆಗೆ ಪ್ರವೇಶಿಸಿ ಪತಿ ವೀಡಿಯೊ ಕಾನ್ಫರೆನ್ಸಿಂಗ್ ನಲ್ಲಿರುವುದು ಇತರರು ನೋಡುತ್ತಿದ್ದಾರೆಂದು ತಿಳಿಯದೇ ಅವಳು ಅವನ ಕೆನ್ನೆಗೆ ಚುಂಬಿಸಲು ಪ್ರಯತ್ನಿಸುತ್ತಾಳೆ.
ಪತಿ ತಕ್ಷಣವೇ ಕಿಸ್ ಮಾಡುವುದನ್ನು ಕಡೆಗಣಿಸುತ್ತಾನೆ. ನಂತರ ಕೋಪಗೊಂಡ ಪತಿ ತನ್ನ ಹೆಂಡತಿಯನ್ನು “ನೀವು ಏನು ಅಸಂಬದ್ಧವಾಗಿ ಮಾಡುತ್ತಿದ್ದೀರಿ” ಎಂದು ಬೈಯುತ್ತಾನೆ.
ಈ ವಿಡಿಯೋವನ್ನು ಉದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡು ಗಮನ ಸೆಳೆದರು. “ಜೂಮ್ ಕಾಲ್ ….. ತುಂಬಾ ತಮಾಷೆ,”ಎಂದು ಹಂಚಿಕೊಳ್ಳುವಾಗ ಬರೆದಿದ್ದಾರೆ.
https://twitter.com/hvgoenka/status/1362720338367287297?ref_src=twsrc%5Etfw%7Ctwcamp%5Etweetembed%7Ctwterm%5E1362720338367287297%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-video-woman-tries-to-kiss-husband-during-zoom-call-his-reaction-divides-viewers-2375967