ಉಪಸಮರಕ್ಕೆ ಇಂದೇ ಮುಹೂರ್ತ ? : ಸಂಜೆ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ!
ಬಹುನಿರೀಕ್ಷಿತ ಉಪಸಮರಕ್ಕೆ ಇಂದೇ ಮುಹೂರ್ತ ಫಿಕ್ಸ್ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಸಂಜೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಯಲಿದ್ದು ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆ ದಟ್ಟವಾಗಿವೆ. ಈಗಾಗಲೇ ಬೆಳಗಾವಿ, ಬಸವಕಲ್ಯಾಣ, ಮಸ್ಕಿ, ಸಿಂದಗಿ, ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಯಾರಿ ನಡೆಸಿದ್ದು, ಕೇಂದ್ರ ಮಟ್ಟದ ಲಾಬಿ ಶುರುವಾಗಿದೆ.
ಇಂದು ಸಂಜೆ 4.30 ಕ್ಕೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಟಿ ಇದೆ. 5 ರಾಜ್ಯಗಳ ಚುನಾವಣೆಗೆ ಉಪ ಚುನಾವಣೆಗೆ ದಿನಾಂಕ ಫಿಕ್ಸ್ ಘೋಷಣೆ ಆಗೋ ಸಾಧ್ಯತೆ ಇದೆ.
2020ರಲ್ಲಿ ನಡೆದ ಎರಡು ಕ್ಷೇತ್ರಗಳಿಗೆ (ಆರ್.ಆರ್.ನಗರ ಮತ್ತು ಶಿರಾ) ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಗೆಲುವಿನ ಹುಮ್ಮಸ್ಸಿನಲ್ಲಿರುವ ಕಮಲ ಪಾಳಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ಸಜ್ಜಾಗುತ್ತಿದೆ. ಇನ್ನು ಕಾಂಗ್ರೆಸ್ ಗೆ ತನ್ನ ಕ್ಷೇತ್ರಗಳಾಗಿರುವ ಮಸ್ಕಿ ಮತ್ತು ಬಸವಕಲ್ಯಾಣ ುಳಿಸಿಕೊಳ್ಳಲು ಸವಾಲು ಒಂದೆಡೆಯಾದ್ರೆ, ಬಿಜೆಪಿ ಪ್ರಾಬಲ್ಯದ ಬೆಳಗಾವಿ ಹಾಗೂ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಸಿಂದಗಿಯನ್ನು ಕೈ ವಶ ಮಾಡಿಕೊಂಡು ಇಬ್ಬರಿಗೂ ತಿರುಗೇಟು ನೀಡಲು ಕೈ ಪಾಳಯ ತಂತ್ರ ರೂಪಿಸುತ್ತಿದೆ.
ಇತ್ತ ಬೈ ಎಲೆಕ್ಷನ್ ನಿಂದ ದೂರ ುಳಿಯುವ ಮಾತುಗಳನ್ನಾಡುತ್ತಿರುವ ದಳಪತಿಗಳಿಗೆ ತನ್ನ ಕ್ಷೇತ್ರ ಸಿಂದಗಿಯನ್ನು ಉಳಿಸಿಕೊಳ್ಳೋದು ಗೌರಚದ ಪ್ರಶ್ನೆಯಾಗಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ.