ರಸ್ತೆ ನಿರ್ಮಾಣದ ಗಲಾಟೆ ವಿಚಾರಕ್ಕೆ ತೆರೆ ಎಳೆದ ನಟ ಯಶ್….!

ಜಮೀನಿನಲ್ಲಿ ರಸ್ತೆ ನಿರ್ಮಿಸುವ ವಿಚಾರಕ್ಕೆ ಯಶ್ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಗಲಾಟೆಗೆ ಯಶ್ ತೆರೆ ಎಳೆದಿದ್ದಾರೆ.

ಯಶ್ ಫಾರ್ಮ್ ಹೌಸ್ ರಸ್ತೆ ನಿರ್ಮಿಸುವ ವಿಚಾರಕ್ಕೆ ಗ್ರಾಮಸ್ಥರು ಹಾಗೂ ಯಶ್ ಪೋಷಕರ ನಡುವೆ ಕೈ ಕೈ ಮುಲಾಯಿಸಿ ಗಲಾಟೆಯಾಗಿದೆ. ಗ್ರಾಮಸ್ಥರು ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ಯಶ್ ಪೋಷಕರೊಂದಿಗೆ ಗಲಾಟೆ ನಡೆದಿತ್ತು. ಹೀಗಾಗಿ ನಿನ್ನೆ ಹಾಸನ ಜಿಲ್ಲೆಯ ತಮ್ಮೇನಹಳ್ಳಿ ಗ್ರಾಮದ ದುದ್ದಾ ಪೊಲೀಸ್ ಠಾಣೆಗೆ ನಟ ಯಶ್  ಭೇಟಿ ನೀಡಿದ್ದಾರೆ.

ಯಶ್ ಜಮೀನ್ ಗೆ ರಸ್ತೆ ನಿರ್ಮಿಸದಂತೆ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ. ವೀಡಿಯೋದಲ್ಲಿ ಯಶ್ ತಾಯಿ ಸಮಾಧಾನ ಮಾಡುವಂತ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವುದು ಕಂಡುಬಂದಿದೆ. ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದವರು ಯಾರು? ಎನ್ನುವ ಬಗ್ಗೆ ವಿಚಾರಿಸಿದ ರಾಮಾಚಾರಿ ಖುದ್ದಾಗಿ ಬಂದ ಮಾಹಿತಿ ಪಡೆದಿದ್ದರು. ಜೊತೆಗೆ ಅವರಿಗೆ ಬುದ್ಧಿ ಹೇಳಿ ಎಂದು ತಿಳಿಸಿದ್ದಾರೆ.

ನಟ ಯಶ್ ಹಾಸನದ ತಿಮ್ಲಾಪುರ ಗ್ರಾಮದಲ್ಲಿ ಫಾರ್ಮ್ ಹೌಸ್ ಬಗ್ಗೆ ಮಾತನಾಡಿದ ಯಶ್ ” ನಾನು ಜನರಿಗೆ ಅನುಕೂಲ ಆಗಲು ನಾನು ಫಾರ್ಮ್ ಮಾಡುತ್ತಿದ್ದೇನೆ. ನಾನು ಗ್ರಾಮಸ್ಥರಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಈ ಜಾಗದ ಬಗ್ಗೆ ನನಗೆ ಮಾಹಿತಿ ಕಡಿಮೆ ಇದೆ. ಆದರೆ ಒಂದು ಮಾತು ನಿಜ ನಮ್ಮಿಂದ ಯಾವುದೇ ತೊಂದರೆಯಾಗುವುದಿಲ್ಲ ” ಎಂದು ಸ್ಪಷ್ಟವಾಗಿ ಹೆಳಿದ್ದಾರೆ.

ಆದರೆ ಗ್ರಾಮಸ್ಥರ ಪ್ರಕಾರ, ‘ಯಶ್ ಫಾರ್ಮ್ ಹೌಸ್ ಗೆ ಈಗಾಗಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೂ ಮತ್ತೊಂದು ರಸ್ತೆ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Spread the love

Leave a Reply

Your email address will not be published. Required fields are marked *