ಲೈವ್ ಕಾರ್ಯಕ್ರಮದ ವೇಳೆ ನಿರೂಪಕನ ಮೇಲೆ ಕುಸಿದು ಬಿದ್ದ ಸ್ಟುಡಿಯೋ ಸೆಟ್!
ಕೊಲಂಬಿಯಾದ ಪ್ರಖ್ಯಾತ ಕ್ರೀಡಾ ನ್ಯೂಸ್ ಚಾನೆಲ್ ESPNನ ಪ್ಯಾನೆಲ್ ಡಿಸ್ಕಷನ್ ವೇಳೆ ಸುದ್ದಿ ನಿರೂಪಕನ ಮೇಲೆ ಸ್ಟುಡಿಯೋ ಸೆಟ್ ಕಳಚಿ ಬಿದ್ದಿದ್ದು, ಅದೃಷ್ಟವಶಾತ್ ಅವರು ಅಪಾಯಗಳಿಂದ ಪಾರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಲಂಬೋದಲ್ಲಿರುವ ESPN ಚಾನೆಲ್‌ನ ಸ್ಟುಡಿಯೋದಲ್ಲಿ ಫುಟ್ಬಾಲ್ ಸಂಬಂಧಿ ಪ್ಯಾನಲ್ ಡಿಸ್ಕಷನ್ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ನಿರೂಪಕ ಕಾರ್ಲೋಸ್ ಆರ್ಡುಜ್ ಅವರ ಹಿಂದೆ ಇದ್ದ ಬೃಹತ್ ಟಿವಿ ಆತನ ಮೇಲೆ ಬಿದ್ದಿದೆ. ಇದರಿಂದಾಗಿ ಅವರ ಮೂಗಿಗೆ ಸ್ವಲ್ಪ ಪೆಟ್ಟಾಗಿದ್ದು, ಮತ್ತಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಟಿವಿ ಕುಸಿದು ಬಿದ್ದ ವೇಳೆ ಪ್ಯಾನೆಲ್‌ನಲ್ಲಿದ್ದ ಹಲವರು ಭಯಭೀತರಾಗಿದ್ದಾರೆ. ನಿರೂಪಕರಿಗೆ ಹೆಚ್ಚು ಅಪಾಯವಾಗಿಲ್ಲ ಎಂದು ತಿಳಿದ ನಂತರ ಅದೇ ಪ್ಯಾನೆಲ್‌ನಲ್ಲಿದ್ದ ಸಹ ನಿರೂಪಕ ಕಾರ್ಯಕ್ರಮವನ್ನು ಮುಂದುವರೆಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
Shocking video. ESPN anchor crushed live on the air by falling set piece. Thankfully he was uninjured. pic.twitter.com/CeFxy8AksY
— Mike Sington (@MikeSington) March 10, 2021
ನಿರೂಪಕ ಕಾರ್ಲೋಸ್ ಒರ್ಡುಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನನಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಮೂಗಿಗೆ ಪೆಟ್ಟಾಗಿತ್ತು. ಹೀಗಾಗಿ ಪರೀಕ್ಷೆ ನಡೆಸಿದಾಗ ಯಾವುದೇ ರೀತಿಯ ಮೂಳೆ ಮುರಿತವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟ್ವಿಟರ್ ಸಿಇಒ 15 ವರ್ಷದ ಹಳೆಯ ಟ್ವೀಟ್; 02 ಕೋಟಿ ರೂ.ಗೆ ಮಾರಾಟ!

