ಮಾಜಿ ಕೇಂದ್ರ ಹಣಕಾಸು ಸಚಿವ, BJP ನಾಯಕ ಯಶ್ವಂತ್ ಸಿನ್ಹಾ TMCಗೆ ಸೇರ್ಪಡೆ!

2018ರಲ್ಲಿ ಬಿಜೆಪಿ ತೊರೆದಿದ್ದ ಪಶ್ಚಿಮ ಬಂಗಾಳದ ಪಕ್ಷದ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ವಿತ್ತ ಸಚಿವರಾಗಿದ್ದರು.

83 ವರ್ಷದ ಯಶ್ವಂತ್‌ ಸಿನ್ಹಾ ಅವರು ಕೋಲ್ಕತ್ತಾದಲ್ಲಿರುವ TMC ಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಂಗಾಳ ಚುನಾವಣೆಯ ವಸ್ತಿಲಿನಲ್ಲಿ ಸಿನ್ಹಾ ಅವರು ಟಿಎಂಸಿಗೆ ಸೇರಿರುವುದು ನಮಗೆ ಮತ್ತಷ್ಟು ಬಲ ತಂದುಕೊಟ್ಟಿದೆ ಎಂಧು ಟಿಎಂಸಿ ಮುಖಂಡ ಸುಬ್ರತಾ ಮುಖರ್ಜಿ ಹೇಳಿದ್ದಾರೆ.

“ದೇಶ ಇಂದು ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿಯು ಪ್ರಜಾಪ್ರಭುತ್ವದ ಸಂಸ್ಥೆಗಳ ಬಲದಲ್ಲಿದೆ. ನ್ಯಾಯಾಂಗ ಸೇರಿದಂತೆ ಈ ಎಲ್ಲಾ ಸಂಸ್ಥೆಗಳು ಈಗ ದುರ್ಬಲವಾಗಿವೆ” ಎಂದು ಯಶ್ವಂತ್‌ ಸಿನ್ಹಾ ಹೇಳಿಕೆ ನೀಡಿದ್ದಾರೆ.

ಯಶ್ವಂತ್ ಸಿನ್ಹಾ ಮೊದಲ ಬಾರಿಗೆ 1990-91 ರಲ್ಲಿ ಹಣಕಾಸು ಮಂತ್ರಿಯಾಗಿದ್ದರು. ನಂತರ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ 1998 ಮತ್ತು 2002 ರ ನಡುವೆ ಎರಡನೇ ಬಾರಿಗೆ ಹಣಕಾಸು ಮಂತ್ರಿಯಾಗಿದ್ದರು. ಬಳಿಕ 2002 ಜುಲೈನಿಂದ 2004 ಮೇ ತಿಂಗಳವರೆಗೆ ಭಾರತದ ವಿದೇಶಾಂಗ ಸಚಿವರಾಗಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ JDU ನೊಂದಿಗೆ RLSP ಪಕ್ಷದ ವಿಲೀನಕ್ಕೆ ವಿರೋಧ; 35 ಮಂದಿ RJDಗೆ ಸೇರ್ಪಡೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights