ಬಿಗ್ ಬಾಸ್ ಮನೆಯಲ್ಲಿ ತುಪ್ಪಕ್ಕಾಗಿ ಜಗಳ : ತುಪ್ಪ ತಿಂದವರ್ಯಾರು? ಟಾರ್ಗೆಟ್ ಆದವರ್ಯಾರು?

ಬಿಗ್ ಬಾಸ್ ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದೆ. ಪ್ರತಿ ಒಬ್ಬ ಸ್ಪರ್ಧಿಗಳ ಸಾಮಾರ್ಥ್ಯ ತಿಳಿಯಲು ಬಿಗ್ ಬಾಸ್ ಚದುರಂಗದಾಟದ ಟಾಸ್ಕ್ ಕೊಟ್ಟಿದ್ದಾರೆ. ಇದರ ಜೊತೆಗೆ ಮನೆಯಲ್ಲಿ ರೇಷನ್ ಕೂಡ ಕಡಿಮೆಯಾಗುತ್ತಿದೆ. ಹೀಗಾಗಿ ಯಾವುದೇ ಪಾದಾರ್ಥ ಮಿತವಾಗಿ ಬಳಸಬೇಕು ಅನ್ನೋದು ಅಡುಗೆ ಟೀಮ್ ನ ವಾದ. ಆದರೂ ತುಪ್ಪದ ಬಾಟಲ್ ಖಾಲಿಯಾಗಿದ್ದರಿಂದ ಮನೆಯ ಎಲ್ಲಾ ಸದಸ್ಯರು ಕೋಪಗೊಂಡರು.

ವಿಶ್ವನಾಥ್, ದಿವ್ಯ ಸುರೇಶ್, ಕ್ಯಾಪ್ಟನ್ ಕೆಪಿ ಅರವಿಂದ್ ಹಾಗೂ ವೈಷ್ಣವಿ ಗೌಡ, ರಾಜೀವ್ ತುಪ್ಪದ ಬಾಟಲಿಯಿಂದ ಹೆಚ್ಚು ಹೆಚ್ಚು ತುಪ್ಪ ಬಳಸಿ ಸೈಲೆಂಟಾಗಿ ಕೊನೆಗೆ ಪ್ರಶಾಂತ್ ಸಂಬರಗಿ ಟಾರ್ಗೇಟ್ ಆದರು. ಹೌದು ..’ ಕೋತಿ ತಾ ತಿಂದು ಮೇಕೆ ಬಾಯಿಗೆ ಒರೆಸಿತು’ ಎನ್ನುವ ಮಾತು ಸಾಮಾನ್ಯವಾಗಿ ಕೇಳಿರುತ್ತೀರಿ. ಇದೇ ರೀತಿ ಮನೆಯ ಸದಸ್ಯರು ತುಪ್ಪ ತಿಂದು ಪ್ರಶಾಂತ್ ಮೇಲೆ ಆ ಆಪಾದನೆ ಬಂದರೂ ಯಾರೂ ಕೂಡ ತಾವು ತುಪ್ಪ ತಿಂದಿದ್ದೀವೇ ಎಂದು ಹೇಳಿಕೊಳ್ಳಲಿಲ್ಲ.

ಈ ಬಗ್ಗೆ ತಿಳಿಯದ ಪ್ರಶಾಂತ್ ತಾವು ಸ್ವೀಟ್ ಮಾಡುವಾಗ ತುಪ್ಪ ಬಳಕೆ ಮಾಡಿಲ್ಲ ಎಂದು ವಾದಿಸಿದರು. ಈ ಮೊದಲೇ ಪ್ರಶಾಂತ್ ಮೇಲೆ ಕಿಡಿ ಕಾರುತ್ತಿದ್ದ ನಿಧಿ ಸುಬ್ಬಯ್ಯ ಇದೇ ಕಾರಣವನ್ನು ಇಟ್ಟುಕೊಂಡು ಪ್ರಶಾಂತ್ ಅವರ ಮೇಲೆ ಹರಿಹಾಯ್ದರು. ಜೊತೆಗೆ ನಿಧಿ ಜೊತೆ ಶುಭಾ ಪುಂಜ, ಚಂದ್ರಕಲಾ ಧ್ವನಿಗೂಡಿಸಿ ಪ್ರಶಾಂತ್ ವಿರುದ್ಧ ಕೋಪಗೊಂಡರು.

ಇದರಿಂದ ತುಪ್ಪ ತಿಂದವರು ಯಾರೋ? ಆರೋಪಕ್ಕೆ ಗುರಿಯಾದವರು ಯಾರೋ? ಆಗಿದ್ದರು. ಪ್ರಶಾಂತ್, ವಿಶ್ವನಾಥ್ ತುಪ್ಪ ತಿಂದರು ಎಂದು ಹೇಳಲು ಹೊರಟರಾದರು ಅವರ ಬಾಯಿಯನ್ನು ಮುಚ್ಚಿದ ಕ್ಯಾಪ್ಟನ್ ಅರವಿಂದ್ ಪ್ರಶಾಂತ್ ಅವರಿಗೆ ಬುದ್ಧಿವಾದ ಹೇಳಿದರು.

ಆದರೆ ನಿಧಿ ಸುಬ್ಬಯ್ಯ ಮಾತ್ರ ಪ್ರಶಾಂತ್ ಸಂಬರಗಿ ಅವರು ತಯಾರಿಸಿದ ಸ್ವೀಟ್ ನಲ್ಲಿ ತುಪ್ಪ ಅಧಿಕವಾಗಿತ್ತು. ಹೀಗಾಗಿ ತಪ್ಪು ಖಾಲಿ ಮಾಡಿದವರು ಪ್ರಶಾಂತ್ ಎನ್ನುವ ನಿರ್ಧಾರಕ್ಕೆ ಬಂದರು. ಈ ಕಡೆ ತುಪ್ಪ ತಿಂದವರು ಬಾತ್ ರೂಂ ನಲ್ಲಿ “ತುಪ್ಪ ಬೇಕಾ ತುಪ್ಪಾ” ಹಾಡನ್ನು ಹಾಡಿಕೊಂಡು ಡ್ಯಾನ್ಸ್ ಮಾಡುವುದು ಕಂಡುಬಂತು.

ಒಟ್ಟಿನಲ್ಲಿ ಮನೆಯಲ್ಲಿ ಕೆಲವರು ಕೆಲವೊಂದು ವಿಚಾರಗಳನ್ನು ಒಪ್ಪದೇ, ತಾಳ್ಮೆಯಿಂದ ವರ್ತಿಸದೇ ಅಥವಾ ಯಾರ ಸಹವಾಸಕ್ಕೂ ಹೋಗದೇ ಇರುವವರು ಟಾರ್ಗೇಟ್ ಆಗುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.