ಕೊರೊನಾ ಬಗ್ಗೆ ಶಾಕಿಂಗ್ ನ್ಯೂಸ್ : ನೀರಿನಿಂದ ಮಾತ್ರವಲ್ಲ ಗಾಳಿಯಿಂದಲೂ ಕಂಟಕ?

ಈ ಹಿಂದೆ ನೀರಿನಲ್ಲಿ ಕೊರೊನಾ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿತ್ತು. ಸದ್ಯ ಮತ್ತೊಂದು ಅಘಾತಕಾರಿ ವಿಚಾರವೊಂದು ಹೊರಬಿದ್ದಿದ್ದು ಮಹಾಮಾರಿ ಕೊರತೊನಾ ನೀರಿನಿಂದ ಮಾತ್ರವಲ್ಲ ಗಾಳಿಯಿಂದಲೂ ಹರಡುವ ಸಾಧ್ಯತೆ ಇದೆ.

ಕೊರೊನಾ ವೈರಾಣು ವಾಯು ಮಾಲಿನ್ಯದಲ್ಲೂ ಇರುತ್ತದೆ ಎನ್ನುವ ಬೆಚ್ಚಿಬೀಳಿಸುವ ಸುದ್ದಿಯೊಂದು ಇಟಲಿಯ ಬೊಲೊಗ್ನಾ ವಿಶ್ವವಿದ್ಯಾಲಯದ ಸಂಶೋಧನೆಯಿಂದ ಹೊರಬಿದ್ದಿದೆ.  “ವಾಯುಮಾಲಿನ್ಯದ ಕಣಗಳ ಮೇಲೆ ಕೊರೊನಾ ವೈರಸ್ ಪತ್ತೆಯಾಗಿದೆ, ಇದು ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆಯೇ ಎನ್ನುವುದು ಹೆಚ್ಚಿನ ಅಧ್ಯಯನದ ಮೂಲಕ ತಿಳಿಯಬೇಕಿದೆ” ಎಂದು ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.

ಸದ್ಯ ನಡೆಯುತ್ತಿರುವ ಅಧ್ಯಯನವು ಪ್ರಾಥಮಿಕ ಹಂತದಲ್ಲಿದ್ದು, ವಾಯುಮಾಲಿನ್ಯದ ಕಣಗಳ ಮೇಲೆ ವೈರಸ್ ಎಷ್ಟು ಹೊತ್ತು ಇರುತ್ತದೆ ಮತ್ತು ಇದು ರೋಗವನ್ನು ಉಂಟುಮಾಡುವಷ್ಟು ಪ್ರಮಾಣದಲ್ಲಿರುತ್ತದೋ ಎನ್ನುವುದು ಇನ್ನೂ ತಿಳಿಯಬೇಕಷ್ಟೇ.ಇಟಲಿಯನ್ ವಿಜ್ಞಾನಿಗಳು ಬರ್ಗಾಮೋ ಪ್ರಾಂತ್ಯದ ಕೈಗಾರಿಕಾ ಪ್ರದೇಶದ ವಾಯುಮಾಲಿನ್ಯದ ಮಾದರಿಯನ್ನು ಸಂಗ್ರಹಿಸಿ, ಖಾಸಗಿ ಪ್ರಯೋಗಾಲಯದಲ್ಲಿ ಕುರುಡು ಪರೀಕ್ಷೆಯನ್ನು ನಡೆಸಿದಾಗ, ವೈರಾಣು ಇರುವ ಅಂಶ ಪತ್ತೆಯಾಗಿದೆ.

ಈ ವಿಚಾರವನ್ನು ಪತ್ತೆಹಚ್ಚಿರುವ ಇಟಲಿಯ ಬೊಲೊಗ್ನಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, “ವಾಯು ಮಾಲಿನ್ಯದಿಂದ ವೈರಸ್ ವ್ಯಾಪಕವಾಗಿ ಹರಡುತ್ತದೆಯೇ ಎನ್ನುವುದು ಅಧ್ಯಯನದ ಮುಂದಿನ ಭಾಗದಲ್ಲಿ ತಿಳಿಯಬಹುದು”. ಕೆಲವು ದಿನಗಳ ಹಿಂದೆ, ಪ್ಯಾರಿಸ್ ನಲ್ಲಿ ಸಂಸ್ಕರಿತ ನೀರನಲ್ಲಿ ಕೊರೊನಾ ವೈರಾಣು ಕಂಡುಬಂದಿದ್ದು ಸಂಶೋಧನೆಯ ಅಧ್ಯಯನವೊಂದರಲ್ಲಿ ಹೇಳಲಾಗಿತ್ತು. ಆದರೆ, ಗಾಳಿ ಮತ್ತು ನೀರಿನಲ್ಲಿ ಕೂರೊನಾ ವೈರಾಣು ಹರಡುವ ಸಾಧ್ಯತೆಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಒಟ್ಟಿನಲ್ಲಿ ಡಬ್ಯೂಹೆಚ್ ಓ ಹೇಳಿಕೆ ಒಂದು ರೀತಿ ಸಮಾಧಾನ ತಂದಿದ್ದು, ಜನ ನೆಮ್ಮಿದಿಯಾಗಿ ಯಾವುದೇ ಆತಂಕವಿಲ್ಲದೇ ನಿಟ್ಟುಸಿರು ಬಿಡುವಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights