ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ‘ಜಿಹಾದಿ’: ಗಾಝಿಯಾಬಾದ್‌ ಅರ್ಚಕನ ವಿವಾದಾತ್ಮಕ ಹೇಳಿಕೆ!

ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ‘ಜಿಹಾದಿ’ ಎಂದು ಉತ್ತರ ಪ್ರದೇಶದ ಗಾಝಿಯಾಬಾದ್‌ನ ಅರ್ಚಕ ಕರೆದಿದ್ದು, ಅವರು ಕಲಾಂ ಅವರ ಧರ್ಮವನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ದೇವಸ್ಥಾನದಲ್ಲಿ ನೀರು ಕುಡಿದ ಕಾರಣಕ್ಕೆ ಮುಸ್ಲಿಂ ಬಾಲಕನನ್ನು ಅಮಾನುಷವಾಗಿ ಥಳಿಸಿದ್ದ ಈ ಅರ್ಚಕ ಭಾರೀ ವಿರೋಧಕ್ಕೆ ಗುರಿಯಾಗಿದ್ದರು. ಇದೀಗ ಮತ್ತೆ ಅಬ್ದುಲ್‌ ಕಲಾಂ ಅವರನ್ನು ಜಿಹಾದಿ ಎಂದು ಕರೆದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

“ದೇಶದ ಉನ್ನತ ಸ್ಥಾನದಲ್ಲಿರುವ ಯಾವುದೇ ಮುಸ್ಲಿಂ ಭಾರತ ಪರವಾಗಿರಲು ಸಾಧ್ಯವಿಲ್ಲ ಮತ್ತು ಎಪಿಜೆ ಅಬ್ದುಲ್ ಕಲಾಂ ಜಿಹಾದಿಯಾಗಿದ್ದರು” ಎಂದು ದಸ್ನಾ ದೇವಿ ದೇವಸ್ಥಾನದ ಅರ್ಚಕ ನರಸಿಂಗಾನಾದ ಸರಸ್ವತಿ ಅಲಿಗಢದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಡಿಆರ್‌ಡಿಒ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಪಾಕಿಸ್ತಾನಕ್ಕೆ ಪರಮಾಣು ಬಾಂಬ್‌ನ ಸೂತ್ರವನ್ನು ಪೂರೈಸಿದ್ದಾರೆ ಎಂದು ಅವರು ಎಪಿಜೆ ವಿರುದ್ದ ಗಂಭೀರ ಆರೋಪ ಹೊರಿಸಿದ್ದಾರೆ. “ರಾಷ್ಟ್ರಪತಿ ಭವನದಲ್ಲಿ ಎಪಿಜೆ ಅಬ್ದುಲ್‌ ಕಲಾಂ ಒಂದು ಘಟಕವನ್ನು ರಚಿಸಿದ್ದಾನೆ, ಅಲ್ಲಿ ಯಾವುದೇ ಮುಸ್ಲಿಂ ತನ್ನ ಕುಂದುಕೊರತೆಯನ್ನು ಸಲ್ಲಿಸಬಹುದಿತ್ತು” ಎಂದು ಅರ್ಚಕ ಆರೋಪಿಸಿದ್ದಾರೆ.

ಆಸಿಫ್‌ ಎಂಬ ಮುಸ್ಲಿಂ ಬಾಲಕ ದೇವಾಲಯದಲ್ಲಿ ನೀರು ಕುಡಿದಿದ್ದಾನೆ ಎಂಬ ಕಾರಣಕ್ಕೆ ಈ ಹಿಂದೆ ಪೊಲೀಸರು ಶಿರಂಗಿ ನಾನಾದ್ ಯಾದವ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ವೀಡಿಯೊವೊಂದರಲ್ಲಿ ಶಿರಂಗಿ ಯಾದವ್ ಹುಡುಗನೊಂದಿಗೆ ಹೆಸರು ಕೇಳಿ, ನಂತರ ಅಮಾನವಿಯವಾಗಿ ಥಳಿಸುತ್ತಿರುವುವ ವೀಡಿಯೋ ವೈರಲ್ ಆಗಿತ್ತು.

Read Also: ಸಿಎಎ ವಿರೋಧಿ ಹೋರಾಟ ಕೈಬಿಟ್ಟರೆ ಸಚಿವ ಸ್ಥಾನ ನೀಡುವುದಾಗಿ BJP ಆಮಿಷ: ಅಖಿಲ್‌ ಗೊಗೊಯ್ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights