ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಪ್ರಕರಣದಿಂದ BJP ಮಾಜಿ ಸಚಿವ ಖುಲಾಸೆ!

ಕಾನೂನು ವಿಭಾಗದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಎಲ್‌ಎಲ್‌ಎಂ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಬಂದನಕ್ಕೊಳಗಾಗಿದ್ದ ಉತ್ತರ ಪ್ರದೇಶದ ಮಾಜಿ ಕೇಂದ್ರ ಸಚಿವನನ್ನು ಪ್ರಕರಣದಿಂದ ಲಖನೌ ವಿಶೇಷ ಕೋರ್ಟ್ ಶುಕ್ರವಾರ ಖುಲಾಸೆಗೊಳಿಸಿದೆ.

ಮಾಜಿ ಸಚಿವ ಚಿನ್ಮಯಾನಂದ್ ಅಲಿಯಾಸ್ ಕೃಷ್ಣ ಪಾಲ್ ಸಿಂಗ್ ಅವರ ಒಡೆತನದಲ್ಲಿರುವ ಶಹಜಹಾನ್ಪುರದ ಮುಮುಕ್ಷು ಆಶ್ರಮದ  ಕಾನೂನು ಕಾಲೇಜಿನಲ್ಲಿ ಸಂತ್ರಸ್ತ ಯುವತಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ವೇಳೆ ಚಿನ್ಮಯಾನಂದ್ ಆಕೆಯ ಮೇಲೆ‌ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿಯ ತಂದೆ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿರುವ ಶಾಸಕರ ವಿಶೇಷ ನ್ಯಾಯಾಲಯವು ಪ್ರಕರಣ ಸಾಬೀತು ಮಾಡಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದು, ಚಿನ್ಮಯಾನಂದ್‌ ಅವರನ್ನು ಖುಲಾಸೆಗೊಳಿಸಿದೆ.

ಚಿನ್ಮಯಾನಂದ್ ಅವರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಯುವತಿಯ ತಂದೆ 2019 ರ ಆಗಸ್ಟ್ 27 ರಂದು ಶಹಜಹಾನ್ಪುರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಲಖನೌ ವಿಶೇಷ ಕೋರ್ಟ್ ನ್ಯಾಯಾಧೀಶ ಪಿ.ಕೆ.ರಾಯ್ ಅವರು, ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ.

ತೀರ್ಪು ಪ್ರಕಟಿಸುವ ಸಮಯದಲ್ಲಿ, ಚಿನ್ಮಯಾನಂದ್ ಸೇರಿದಂತೆ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಈ ಮಧ್ಯೆ, ಆರೋಪಿ ಮಾಜಿ ಕೇಂದ್ರ ಸಚಿವ ವಿದ್ಯಾರ್ಥಿನಿ ವಿರುದ್ಧ ದಾಖಲಿಸಿದ್ದ ಸುಲಿಗೆ ಮತ್ತು ಬ್ಲಾಕ್ ಮೇಲ್ ಪ್ರಕರಣದಲ್ಲೂ ಯುವತಿಯನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದ ಮೋದಿ; #lieLikeModi ಟ್ರೆಂಡಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights