ವೀಸಾ ಇಲ್ಲದೆ ಭಾರತಕ್ಕೆ ಬಂದ ಅಮೆರಿಕಾ ಮಹಿಳೆ: ಜೈಲು ಶಿಕ್ಷೆ ಕಡಿತಗೊಳಿಸಿದ ಉತ್ತರಾಖಂಡ್‌ ಹೈಕೋರ್ಟ್‌!

ಮಾನ್ಯತೆಯುಳ್ಳ ದಾಖಲೆಗಳಿಲ್ಲದೆ ಭಾರತಕ್ಕೆ ಬಂದು ಸಿಕ್ಕಿಬಿದ್ದಿರುವ ಅಮೆರಿಕಾ ಮೂಲದ ಮಹಿಳೆಗೆ ವಿಧಿಸಿದ್ದ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಹನ್ನೊಂದು ತಿಂಗಳಿಗೆ ಇಳಿಸಿ ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿದೆ.

ತನಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಯುಎಸ್‌ನ ಮಹಿಳೆ ಫರಿದಾ ಮಲಿಕ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆರ್ ಸಿ ಖುಲ್ಬೆ ಅವರ ನ್ಯಾಯಪೀಠವು, ಆಕೆಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯಲ್ಲಿ ಹನ್ನೊಂದು ತಿಂಗಳಿಗೆ ಇಳಿಸಿದೆ.

ಕಡಿಮೆಗೊಳಿಸಲಾಗಿರುವ ಅವಧಿಯನ್ನು ಆಕೆ ಈಗಾಗಲೇ ಜೈಲಿನಲ್ಲಿ ಕಳೆದಿದ್ದಾರೆ. ಹಾಗಾಗಿ, ಆಕೆ ಮರಳಿ ತನ್ನ ದೇಶಕ್ಕೆ ಹೋಗಲು ಬಿಡಬೇಕು ಎಂದು ನ್ಯಾಯಪೀಠವು ಅಧಿಕಾರಿಗಳಿಗೆ ಸೂಚಿಸಿದೆ.

ಕೆಳ ನ್ಯಾಯಾಲಯವು ಆಕೆಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವು ಆಕೆಯ ಅಪರಾಧಕ್ಕೆ ಅನುಗುಣವಾಗಿಲ್ಲ ಎಂದು ಆಕೆಯ ಪರ ವಕೀಲರು ವಾದಿಸಿದ್ದರು. ವಾದವನ್ನು ಆಲಿಸಿದ ಹೈಕೋರ್ಟ್ ಮಹಿಳೆಗೆ ರಕ್ಷಣೆ ನೀಡಿದೆ.

ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧವು ಸೌಹಾರ್ದಯುತವಾಗಿದೆ ಮತ್ತು ಭಾರತದಲ್ಲಿ ತಂಗಿದ್ದಾಗ ಮಹಿಳೆ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಲಾಗಿದೆ.

ಮಾನ್ಯ ವೀಸಾ ಇಲ್ಲದೆ ಪ್ರಯಾಣ ಮಾಡಿರುವುದು ಕಂಡುಬಂದ ನಂತರ ಅಮೆರಿಕದ ಮಹಿಳೆಯನ್ನು ಭಾರತೀಯ ಭದ್ರತಾ ಸಿಬ್ಬಂದಿ ಬಸ್ ಪರಿಶೀಲಿಸುವಾಗ ಇಂಡೋ-ನೇಪಾಳ ಗಡಿಯಲ್ಲಿ ಬಂದಿಸಿದ್ದರು.

ಇದನ್ನೂ ಓದಿ: ಯುಎಸ್ ನ ಓಹಟ್ಚಿಯಲ್ಲಿ ಪ್ರಬಲ ಸುಂಟರಗಾಳಿಗೆ 5 ಜನ ಸಾವು : 20ಕ್ಕೂ ಹೆಚ್ಚು ಜನ ಗಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights