ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ‘ಇವಿಎಂ’ ಪತ್ತೆ : ತನಿಖೆಗೆ ಪ್ರಿಯಾಂಕಾ ಗಾಂಧಿ ಆಗ್ರಹ!
ಗುರುವಾರ ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಮುಕ್ತಾಯಗೊಂಡ ಕೆಲವೇ ಗಂಟೆಗಳ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಇದು ಪಥಾರ್ಕಂಡಿ ಬಿಜೆಪಿ ಅಭ್ಯರ್ಥಿ ಕೃಷ್ಣೇಂಡು ಪಾಲ್ ಅವರ ಕಾರಿನಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ತೋರಿಸಿದೆ.
ಅಸ್ಸಾಂ ಮೂಲದ ಪತ್ರಕರ್ತ ಅಟನು ಭುಯಾನ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ, ಈ ಘಟನೆಯ ನಂತರ “ಪಠಾರ್ಕಂಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಈ ಘಟನೆಯ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಅವರು ಇಂತಹ ದೂರುಗಳ ಬಗ್ಗೆ ಚುನಾವಣಾ ಆಯೋಗವು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು ಮತ್ತು ಇವಿಎಂ ಬಳಕೆಯ ಬಗ್ಗೆ ಗಂಭೀರವಾದ ಮರುಮೌಲ್ಯಮಾಪನವನ್ನು ಎಲ್ಲಾ ರಾಷ್ಟ್ರೀಯ ಪಕ್ಷಗಳು ನಡೆಸಬೇಕಾಗಿದೆ ಎಂದು ಹೇಳಿದರು.
Every time there is an election videos of private vehicles caught transporting EVM’s show up. Unsurprisingly they have the following things in common:
1. The vehicles usually belong to BJP candidates or their associates. ….
— Priyanka Gandhi Vadra (@priyankagandhi) April 2, 2021
ಬಿಜೆಪಿ ಚುನಾವಣಾ ಯಂತ್ರೋಪಕರಣಗಳನ್ನು ಬಳಸುವ ವಿಡಿಯೋ ಬಹಿರಂಗಪಡಿಸಿದವರನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಪ್ರಿಯಾಂಕಾ ಹೇಳಿದರು. “ಪ್ರತಿ ಬಾರಿಯೂ ಖಾಸಗಿ ವಾಹನಗಳ ಮೂಲಕ ಚುನಾವಣಾ ಇವಿಎಂ ವಿಡಿಯೋ ಸೆರೆಹಿಡಿಯಲಾಗುತ್ತದೆ. ಪ್ರತೀ ಬಾರಿ ವಿಡಿಯೋ ಸೆರೆಹಿಡಿದಾಗ ಈ ಕೆಳಗಿನ ವಿಷಯಗಳನ್ನು ಸಾಮಾನ್ಯವಾಗಿರುತ್ತೆವೆ: 1. ವಾಹನಗಳು ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿಗಳು ಅಥವಾ ಅವರ ಸಹವರ್ತಿಗಳಿಗೆ ಸೇರಿರುತ್ತವೆ. 2. ವೀಡಿಯೊಗಳನ್ನು ಒಂದು ಸಾಮಾನ್ಯ ಘಟನೆಗಳಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ವಿಪಥನಗಳೆಂದು ತಳ್ಳಿಹಾಕಲಾಗುತ್ತದೆ. 3. ವೀಡಿಯೊಗಳನ್ನು ಬಹಿರಂಗಪಡಿಸಿದವರನ್ನು ಟಾರ್ಗೇಟ್ ಮಾಡಿ ಆರೋಪಿಸಲು ಬಿಜೆಪಿ ತನ್ನ ಮಾಧ್ಯಮ ಯಂತ್ರೋಪಕರಣಗಳನ್ನು ಬಳಸುತ್ತದೆ, ”ಎಂದು ಅವರು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
“ಇಂತಹ ಹಲವಾರು ಘಟನೆಗಳು ವರದಿಯಾಗುತ್ತಿವೆ ಮತ್ತು ಅವುಗಳ ಬಗ್ಗೆ ಏನೂ ಮಾಡಲಾಗುತ್ತಿಲ್ಲ. ಈ ದೂರುಗಳ ಬಗ್ಗೆ ಚುನಾವಣಾ ಆಯೋಗ ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕಾಗಿದೆ ಮತ್ತು ಇವಿಎಂ ಬಳಕೆಯ ಬಗ್ಗೆ ಗಂಭೀರವಾದ ಮರು ಮೌಲ್ಯಮಾಪನವನ್ನು ಎಲ್ಲಾ ರಾಷ್ಟ್ರೀಯ ಪಕ್ಷಗಳು ಕೈಗೊಳ್ಳಬೇಕಾಗಿದೆ ”ಎಂದು ಪ್ರಿಯಾಂಕಾ ಹೇಳಿದರು.
ಗುರುವಾರ ಎರಡನೇ ಹಂತದ ಚುನಾವಣೆಯಲ್ಲಿ 39 ವಿಧಾನಸಭಾ ಸ್ಥಾನಗಳು ಅಸ್ಸಾಂನಲ್ಲಿ ನಡೆದವು. ಸಂಜೆ 6 ರವರೆಗೆ 73.03 ರಷ್ಟು ಮತದಾನವಾಗಿದೆ.

