ಮೋದಿ – ಮಮತಾ ಮುಖಾಮುಖಿ: ಹೂಗ್ಲಿಯಲ್ಲಿ ಇಬ್ಬರೂ ಚುನಾವಣಾ ಪ್ರಚಾರ!

ಬಂಗಾಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಬಂಗಾಳಕ್ಕೆ ತೆರಳಿದ್ದು, ಇಂದು ಮೋದಿ ಮತ್ತು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಂದೇ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಹೋಗ್ಲಿ ಜಿಲ್ಲೆಯ ಅರಾಂಬಾಗ್‌ ಲೋಕಸಭಾ ವ್ಯಾಪ್ತಿಯಲ್ಲಿ ಇಬ್ಬರೂ ನಾಯಕರು ತಮ್ಮ ಅಭ್ಯರ್ಥಿಗಳ ಪರ ರ್ಯಾಲಿಗಳನ್ನು ನಡೆಸುತ್ತಿದ್ದಾರೆ.

ಹೂಗ್ಲಿ ಜಿಲ್ಲೆಯಲ್ಲಿರುವ ತಾರಕೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಸಭೆಯನ್ನು ನಡೆಸಿದ್ದು, ಅದರ ಗಡಿಯಲ್ಲೇ ಇರುವ ಹರಿಪಾಲ್‌ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಪ್ರಚಾರ ನಡೆಸಿದ್ದಾರೆ.

ಕೊಲ್ಕತ್ತಾದಿಂದ 63 ಕಿ.ಮೀ ದೂರದಲ್ಲಿರುವ ತಾರಕೇಶ್ವರ ವಿಧಾನಸಭಾ ಕ್ಷೇತ್ರವು ಹಿಂದೂಗಳ ಯಾತ್ರಾ ಸ್ಥಳವೆಂದು ಪ್ರಸಿದ್ಧಿ ಪಡೆದುಕೊಂಡಿದೆ. ಕಳೆದ ಎರಡು ಚುನಾವಣೆಗಳಿಂದ ಈ ಕ್ಷೇತ್ರದ ಟಿಎಂಸಿಯ ಭದ್ರಕೋಟೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿಯಿಂದ ರಾಮೆಂದು ಸಿಂಘಾ ರಾಯ್‌ ಮತ್ತು ಬಿಜೆಪಿಯಿಂದ ನೇತಾ ಸ್ಪಪನ್‌ ದಾಸ್‌ ಗುಪ್ತಾ ಅವರು ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬೀದಿ ಪೋಕರಿಯಂತೆ ಮಾತನಾಡುತ್ತಾರೆ: ಸಂಸದೆ ಮೊಹುವಾ ಮೊಹಿತ್ರಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights