ಸೈನ್ಸ್ ವಿದ್ಯಾರ್ಥಿಗಳಿಗೆ ಅವಕಾಶ: ರಾಜ್ಯ ಸರ್ಕಾರದ 154 ಹುದ್ದೆಗಳಿಗೆ ಅರ್ಜಿ ಅಹ್ವಾನ!
ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ 154 ಸಮಾಲೋಚಕ, ಯೋಜನಾ ವ್ಯವಸ್ಥಾಪಕ, ವಿಶ್ಲೇಷಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಗದಗ, ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಧಾರವಾಡ, ಕೊಪ್ಪಳ, ಹಾಸನ, ಬೀದರ್ (ಒಟ್ಟು 11 ಜಿಲ್ಲೆಗಳಲ್ಲಿ) ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಸಂದರ್ಶನವನ್ನು ಕೇಂದ್ರ ಕಚೇರಿ ಅಥವಾ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು.
ಉದ್ಯೋಗಗಳ ವಿವರ:
– ಕೇಂದ್ರ ಕಚೇರಿ
* ಜೆಜೆಎಂ ಸಮಾಲೋಚಕರು – 3
* ಐಟಿ ಸಮಾಲೋಚಕರು – 1
* ಡಬ್ಲ್ಯುಕ್ಯುಎಮ್‍ಎಸ್ ಸಮಾಲೋಚಕರು – 4
* ಐಎಮ್‍ಐಎಸ್ ಸಮಾಲೋಚಕರು – 1
– ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ – ಜಲ ಜೀವನ ಮಿಷನ್
* ಜಿಲ್ಲಾ ಯೋಜನಾ ವ್ಯವಸ್ಥಾಪಕ – 2
* ಜಿಲ್ಲಾ ಎಂಐಎಸ್ ಸಮಾಲೋಚಕ – 5
* ನೀರಿನ ಮಾದರಿಗಳ ಸಂಗ್ರಹಕೋಶದ ಉಸ್ತುವಾರಿ – 32
* ಸೂಕ್ಷ್ಮಾಣುಜೀವಿ ಶಾಸಜ್ಞ – 80
* ಹಿರಿಯ ವಿಶ್ಲೇಷಣೆಗಾರ – 4
* ವಿಶ್ಲೇಷಣೆಗಾರ – 6
* ಕಿರಿಯ ವಿಶ್ಲೇಷಣೆಗಾರ – 9
– ಜಿಲ್ಲಾ ಪಂಚಾಯಿತಿ ಕಚೇತಿ- ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)
* ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು – 1
* ಜಿಲ್ಲಾ ಎಂಐಎಸ್ ಸಮಾಲೋಚಕರು – 1
* ಜಿಲ್ಲಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕರು – 1
– ವೃತ್ತ ಕಚೇರಿ-ಜಲ ಜೀವನ ಮಿಷನ್
* ಹಿರಿಯ ಸಮಾಲೋಚಕರು – 1
ವಿದ್ಯಾರ್ಹತೆ: ಬಿಜಿನೆಸ್ ಮ್ಯಾನೇಜ್‍ಮೆಂಟ್, ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಸೈನ್ಸ್/ ಎಲೆಕ್ಟ್ರಾನಿಕ್ಸ್, ಕೆಮಿಸ್ಟ್ರಿ/ ಬಯೋಲಜಿ/ ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ/ ಬಯೋಕೆಮಿಸ್ಟ್ರಿ, ಸ್ಟ್ಯಾಟಿಸ್ಟಿಕ್ಸ್/ ಎಕನಾಮಿಕ್ಸ್, ಎನ್ವಿರಾನ್‍ಮೆಂಟಲ್/ ಸಿವಿಲ್ ಇಂಜಿನಿಯರಿಂಗ್, ಸೋಷಿಯಲ್ ಸೈನ್ಸ್, ಮ್ಯಾನೇಜ್‍ಮೆಂಟ್, ಸೋಷಿಯಲ್ ವರ್ಕ್, ಮಾಸ್ ಕಮ್ಯುನಿಕೇಷನ್, ಜರ್ನಲಿಸಂನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ, ಎಂಸಿಎ, ಎಂಎಸ್ಸಿ ಜತೆ ವೃತ್ತಿ ಅನುಭವ ಅವಶ್ಯ.
ವಯೋಮಿತಿ: 23.12.2020ಕ್ಕೆ ಗರಿಷ್ಠ 45 ವರ್ಷ.
ವೇತನ: ಹುದ್ದೆಗೆ ಅನುಗುಣವಾಗಿ ಮಾಸಿಕ 22,000 ರೂ.ನಿಂದ 1,50,000 ರೂ. ವರೆಗೆ ಇದೆ.
ಗುತ್ತಿಗೆ / ಹೊರಗುತ್ತಿಗೆ ಅವಧಿ: ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕ ಹುದ್ದೆಗಳಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅವಧಿ ನವೀಕರಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನ: 28.4.2021
ಅರ್ಜಿ ಸಲ್ಲಿಕೆ ವಿಳಾಸ: ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆಎಚ್‍ಬಿ ಕಟ್ಟಡ, ಕಾವೇರಿ ಭವನ, ಕೆಜಿ ರಸ್ತೆ, ಬೆಂಗಳೂರು.
ಹೆಚ್ಚಿನ ಮಾಹಿತಿಗಾಗಿ: https://rdpr.karnataka.gov.in/
ಇದನ್ನೂ ಓದಿ: ರೋಗಿಯ ಮರಣಾ ನಂತರ ವೈದ್ಯರೊಂದಿಗೆ ಕಾಂಗ್ರೆಸ್ ಶಾಸಕ ಅಸಭ್ಯ ವರ್ತನೆ; ವೈದ್ಯ ರಾಜೀನಾಮೆ!