ಜನ ವಿರೋಧಿ ನೀತಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪಾಠ ಕಲಿಸಿ: ಮತದಾರರಲ್ಲಿ ಹೆಚ್ಡಿಕೆ ಮನವಿ

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಯ ಸರ್ಕಾರವಾಗಿದೆ. ಈ ಸರ್ಕಾರಗಳಿಗೆ ಪಾಠ ಕಲಿಸಬೇಕಾಗಿದೆ. ರೈತರ ಪರ, ಬಡಜನರ ಪರ ಕಾಳಜಿ ಇರುವ ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಬಿಜೆಪಿಗೆ ಪಾಠ ಕಲಿಸಿ ಎಂದು ಮಾಜಿ ಮುಖ್ಯಮಂತ್ರಿಗಳು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ಬಸವಕಲ್ಯಾಣದ ಮತದಾರರಲ್ಲಿ ಮನವಿ ಮಾಡಿದರು.

ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರವಾಗಿ ಬಸವಕಲ್ಯಾಣದ ವಿವಿಧೆಡೆ ನಡೆದ ಲಿಂಗಾಯತ & ರೆಡ್ಡಿ ಸಮಾವೇಶ, ಬಹಿರಂಗ ಸಭೆ, ಮಾದಿಗ ಸಮಾಜದ ಸಭೆಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಬೆಳೆಯುವ ಬೆಳೆಗಳಿಗೆ ಎರಡು ಪಟ್ಟು ಬೆಲೆ ಕೊಡ್ತಿವಿ ಎಂದು ಕೇಂದ್ರ ಸರ್ಕಾರದವ್ರು ಹೇಳಿದ್ರು. ಆದ್ರೆ ಹೀಗ ಖರ್ಚು ಜಾಸ್ತಿ ಮಾಡಿದ್ದಾರೆ ಆದರೆ ಬೆಲೆ ಜಾಸ್ತಿ ಮಾಡಿಲ್ಲ.

ಅಲ್ಲದೇ ರಸಗೊಬ್ಬರಗಳ ಬೆಲೆ, ಡಿಸೇಲ್, ಪೆಟ್ರೋಲ್ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಇದರೊಂದಿಗೆ ಸಾಗಾಣಿಕೆ ವೆಚ್ಚ ಕೂಡ ಜಾಸ್ತಿಯಾಗ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಹೊರದೇಶದಲ್ಲಿರುವ ಸಂಪತ್ತು, ಬ್ಲಾಕ್ ಮನಿಯನ್ನು ದೇಶಕ್ಕೆ ತರ್ತಿವಿ ಅಂತ ಹೇಳಿದ್ರು, ಎಷ್ಟು ಬ್ಲಾಕ್ ಮನಿ, ಹೊರದೇಶಗಳಲ್ಲಿನ ಸಂಪತ್ತನ್ನ ಮರಳಿ ದೇಶಕ್ಕೆ ತಂದಿದ್ದಾರೆ. ತಂದು ಯಾರಿಗೆ ಕೊಟ್ಟಿದ್ದಾರೆಂದು ಹೆಚ್ಡಿಕೆ ಪ್ರಶ್ನಿಸಿದರು.

ನಾವೆಲ್ಲ ರೈತರ ಮಕ್ಕಳು ರೈತರ ಪಕ್ಷವಾದ ಜೆಡಿಎಸ್ ಗೆ ಬೆಂಬಲ ನೀಡಬೇಕಾಗಿದೆ. ರೈತರೇ ನಮ್ಮ ದೇಶದ ಬೆನ್ನೆಲುಬು, ರೈತರ ಪರವಾಗಿ ಇರುವ ಪಕ್ಷ ನಮ್ಮ ಜೆಡಿಎಸ್ ಪಕ್ಷವಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ನಿಮ್ಮ ಮುಂದೆ ಮೂರು ಪಕ್ಷಗಳಿದ್ದಾವೆ. ಜಾತ್ಯಾತೀತ ಜನತಾದಳಕ್ಕೆ ಯಾಕೇ ಮತ ಕೊಡಬೇಕು ಎಂದರೇ, ಯಾವಾಗ್ಯಾವಾಗ ಜಾತ್ಯಾತೀತ ಜನತಾದಳ ಪರಿವಾರದ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಅವಾಗಲೆಲ್ಲ, ಹೊಸ ಹೊಸ ಯೋಜನೆಗಳು, ಯೋಚನೆಗಳು ಪ್ರಾರಂಭವಾಗಿವೆ. ಯಾರಾದರು ಒಬ್ಬ ಮುಖ್ಯಮಂತ್ರಿ ಬಡವರ, ಹರಿಜನ ಗಿರಿಜನರ ಮನೆಯಲ್ಲಿ ವಾಸ್ತವ್ಯ ಹೂಡಿ, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆಂದರೇ, ಅದು ಕುಮಾರಸ್ವಾಮಿರವರು ಎಂದು ಮಾಜಿ ಸಚಿವರು ಸಿಂಧನೂರು ನಗರದ ಶಾಸಕರಾದ ವೆಂಕಟರಾವ್ ನಾಡಗೌಡ ರವರು ಹೇಳಿದರು.

ಈ ವೇಳೆ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ, ದೇವದುರ್ಗದ ಕರೆಮ್ಮ ನಾಯಕ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶಗೌಡ, ಬೋಜೆಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪೂರ, ಕೃಷ್ಣಾರೆಡ್ಡಿ, ಆನಂದ್, ಆಕಾಶ ಸೇರಿದಂತೆ ಅನೇಕರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights