ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಸೇವಂತಾ ಹರದಾರೆ ಅವರು ನಿಧನ..!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಸೇವಂತಾ ಹರದಾರೆ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರ ಆಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಹಡಲಗಾ ಗ್ರಾಮದಲ್ಲಿ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ನನ್ನ ಮಾತೋಶ್ರೀಯವರು ನನ್ನ ಜೀವನದ ಪ್ರೇರಣಾ ಶಕ್ತಿ, ಪ್ರತಿ ಯಶಸ್ಸಿನ ಏಳು-ಬೀಳಿನಲ್ಲೂ ಸದಾ ನನ್ನೊಂದಿಗಿರುತ್ತಿದ್ದ ದಾರಿದೀಪ, ನನ್ನ ಜೀವ-ಜೀವನ ರೂಪಿಸಿ, ನನ್ನಮ್ಮ ತಿಳಿಸಿಕೊಟ್ಟ ಜೀವನದ ಮೌಲ್ಯಗಳು, ಅವರ ಮಾರ್ಗದರ್ಶನ, ನೆನಪು ಎಂದೆಂದಿಗೂ ನನ್ನ ಮನದಲ್ಲಿ ಚಿರಸ್ಥಾಯಿ. ನನ್ನ ಜೀವನದ ಸ್ಫೂರ್ತಿಯಾಗಿದ್ದ ನನ್ನಮ್ಮ ಇನ್ನು ನೆನಪು ಮಾತ್ರ.

ನನ್ನ ತಾಯಿಯಂತಿದ್ದ ನನ್ನ ಅತ್ತೆಯವರು ನನ್ನೆಲ್ಲ ಏಳು ಬಿಳುಗಳನ್ನು ಕಂಡಿದ್ದಾರೆ. ನನ್ನ ಹಾಗೂ ನನ್ನ ಧರ್ಮಪತ್ನಿಯ ಇವತ್ತಿನ ಏಳಿಗೆಗೆ ನನ್ನ ಅತ್ತೆಯವರ ಸಲಹೆ, ಸಹಕಾರ ಅದೆಲ್ಲಕ್ಕಿಂತ ಮುಖ್ಯವಾಗಿ ಆಶೀರ್ವಾದ ಹಾಗೂ ಅವರ ಶುಭ ಹಾರೈಕೆಯಿಂದ ಇಲ್ಲಿಯವರೆಗೆ ಬಂದಿದ್ದೇವೆ. ಪೂಜ್ಯ ತಾಯಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಣ್ಣಾಸಾಹೇಬ್ ಜೊಲ್ಲೆ ಸಂತಾಪ ಸೂಚಿಸಿದ್ದಾರೆ.

Spread the love

Leave a Reply

Your email address will not be published. Required fields are marked *