‘ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ’ ಅರವಿಂದ್ ಕೇಜ್ರಿವಾಲ್ ಘೋಷಣೆ..!

ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಹೇರಲಾಗಿದೆ.

ಹೌದು… ದೆಹಲಿಯಲ್ಲಿ ನಿತ್ಯ 10 ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ಕೇಸ್ ದಾಖಲಾಗುತ್ತಿವೆ. ಬೆಡ್ ಹಾಗೂ ಐಸಿಯು ಕೊರತೆಯಾಗಿ ಪರಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ನಾಳೆಯಿಂದಲೇ ನೈಟ್ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ.

ಈ ಬಗ್ಗೆ ಸ್ವತ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದನ್ನು ಘೋಷಣೆ ಮಾಡಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ತುರ್ತು ಸೇವೆ ಬಿಟ್ಟು ಅನಗತ್ಯ ಓಡಾಟ ಮಾಡುವಂತಿಲ್ಲ. ಹಾಲು, ಹಣ್ಣು, ದಿನಿಸಿ, ಔಷಧಿ ಅಗತ್ಯ ಸೇವೆಗಳು ಬಿಟ್ಟರೆ ಇನ್ಯಾರು ಕೂಡ ಅನಗತ್ಯವಾಗಿ ಓಡಾಡುವಂತಿಲ್ಲ.

ಮಾಲ್, ಸ್ವಿಮ್ಮಿಂಗ್ ಪೂಲ್, ಮಾರುಕಟ್ಟೆ, ಜಿಮ್, ರೆಸ್ಟೋರೆಂಟ್, ಪಾರ್ಕ್ ವೀಕೆಂಡ್ ಇರೋದಿಲ್ಲ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಹೋಟೆಲ್ ಗಳಿಗೆ ಪಾರ್ಸಲ್ ಮಾತ್ರ ಅವಕಾಶ ಇದೆ. ಸಿನಿಮಾ 30% ರಷ್ಟು ಮಾತ್ರ ಅವಕಾಶ ನೀಡಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights