ಇಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರೊನಾ ಪಾಸಿಟಿವ್..!

ನಿನ್ನೆಯಷ್ಟೇ ಸಿಎಂ ಬಿಎಸ್ ಯಡುಯೂರಪ್ಪಗೆ ಕೊರೊನಾ ಸೋಂಕು ತಗುಲಿದ್ದು ಇಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರೊನಾ ಸೋಂಕು ತಗುಲಿದೆ.

ಹೌದು… ಉಪ ಚುನಾವಣಾ ಮತಯಾಚನೆಯಲ್ಲಿ ತೊಡಗಿದ್ದ ಹಾಲಿ ಹಾಗೂ ಮಾಜಿ ಸಿಎಂ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಸಿಎಂ ಬಿಎಸ್ ಯಡುಯೂರಪ್ಪಗೆ ಕೊರೊನಾ ಸೋಂಕು ದೃಢಪಟ್ಟು ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಬಿಎಸ್ ವೈಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಕುಮಾರಸ್ವಾಮಿ ಬೇಗ ಗುಣಮುಖರಾಗುವಂತೆ ಟ್ವೀಟ್ ಮೂಲಕ ಹಾರೈಸಿದ್ದರು.

ಆದರೆ ಇಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಟ್ವೀಟ್ ಮೂಲಕ ಸ್ವತ: ಕುಮಾರಸ್ವಾಮಿಯವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ತಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights