ತಮಿಳಲ್ಲಿ ಮತ್ತೆ ಸೂರ್ಯೋದಯ: ಅಧಿಕಾರದತ್ತ ಡಿಎಂಕೆ; ಸ್ಟಾಲಿನ್‌ಗೆ ಸಿಎಂ ಖುರ್ಚಿ?

ತಮಿಳುನಾಡಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈ ವರೆಗೆ ಹಲವು ಸುತ್ತಿನ ಮತ ಎಣಿಕೆ ನಡೆದಿದ್ದು, ಈ ಪೈಕಿ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತುಮೈತ್ರಿಕೂಟ 135 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದತ್ತ ದಾಪುಗಾಲಿಟ್ಟಿದೆ.

ಒಟ್ಟು 234 ವಿಧಾನಸಭಾ ಕ್ಷೇತ್ರಗಳ ತಮಿಳುನಾಡಿನಲ್ಲಿ ಸರಳ ಬಹುಮಕ್ಕೆ 118 ಸ್ಥಾನಗಳ ಅಗತ್ಯವಿದೆ. ಡಿಎಂಕೆ ಒಕ್ಕೂಟವು ಸದ್ಯಕ್ಕೆ 135 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದರಿಂದ ಬಹುಮತಕ್ಕೆ ಸುರಕ್ಷಿತ ಸ್ಥಾನದಲ್ಲಿದೆ.

ಜಯಲಲಿತಾ ನಿಧನದ ನಂತರ ನಡೆದ ಈ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ಎಐಎಡಿಎಂಕೆ ಪಕ್ಷವು 97 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಪ್ರಬಲ ಪೈಪೋಟಿ ನೀಡಿತ್ತಿದೆಯಾದರೂ ಅದು ಅದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಂಕಿ ಅಂಶಗಳು ಸೂಚಿಸುತ್ತಿವೆ.

ಚಿತ್ರನಟ ಕಮಲ್ ಹಾಸನ್ ನೇತೃತ್ವದ ಎಂಎನ್ಎಂ ಪಕ್ಷ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ಇಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ 05 ಕಡೆ ಅದು ಮುನ್ನಡೆ ಸಾಧಿಸಿದೆ. ಅದೇ ರೀತಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಎರಡು ದಶಕದಿಂದ ವಿರೋಧ ಪಕ್ಷದಲ್ಲಿದ್ದ ಡಿಎಂಕೆ ಅಧಿಕಾರದತ್ತು ನಡೆಯುತ್ತಿದ್ದು, ಎಂಕೆ ಸ್ಟಾಲಿನ್ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬಂಗಾಳದಲ್ಲಿ TMC ಮ್ಯಾಜಿಕ್‌ ನಂಬರ್‌ನಲ್ಲಿ ಮುನ್ನಡೆ; ಆದರೆ, ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನೆಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights