44 ದೇಶಗಳಲ್ಲಿ ಕಾಣಿಸಿಕೊಂಡ ಭಾರತೀಯ ಕೋವಿಡ್ ರೂಪಾಂತರ: ಡಬ್ಯ್ಲೂಹೆಚ್ಓ

ಭಾರತೀಯ ಕೋವಿಡ್ ರೂಪಾಂತರಿ 44 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.

ಹೌದು… ಭಾರತದಲ್ಲಿ ಸ್ಪೋಟಗೊಂಡ ರೂಪಾಂತರಿ ಕೊರೊನಾ ವಿಶ್ವದಾದ್ಯಂತದ ಹಲವಾರು ದೇಶಗಳಲ್ಲಿ ಕಂಡುಬಂದಿದೆ ಎಂದು ಡಬ್ಯ್ಲೂಹೆಚ್ಓ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದ ಕೋವಿಡ್ -19 ರ ಬಿ.1.617 ರೂಪಾಂತರವು “ಎಲ್ಲಾ ಆರು ಡಬ್ಲ್ಯುಎಚ್‌ಒ (ವಿಶ್ವ ಆರೋಗ್ಯ ಸಂಸ್ಥೆಯ ವಲಯಗಳು) ಪ್ರದೇಶಗಳಲ್ಲಿನ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು WHO ತಿಳಿಸಿದೆ.

ಈ ವಾರದ ಆರಂಭದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು, ಭಾರತದ ರೂಪಾಂತರಿ ತಳಿ ಬಿ.1.617 ಅನ್ನು ಘೋಷಿಸಿತು. ಇದು ಮೂರು ವಿಭಿನ್ನ ಉಪ-ವಂಶಾವಳಿಗಳನ್ನು ಮತ್ತು ಗುಣಲಕ್ಷಣಗಳನ್ನು ಹೊಂದಿದೆ ಎಂದು ಘೋಷಿಸಿ, ಇದು ಆತಂಕದ ವಿಷಯ ಎಂದು ತಿಳಿಸಿತು. ಆದ್ದರಿಂದ ಇದನ್ನು ಕೋವಿಡ್-19ರ ಇತರ ಮೂರು ರೂಪಾಂತರಗಳನ್ನು ಒಳಗೊಂಡಿರುವ ಪಟ್ಟಿಗೆ ಸೇರಿಸಲಾಗಿದೆ. ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಿ ವೈರಸ್‌ಗಳ ಪಟ್ಟಿಯಲ್ಲಿ ಈಗ ಭಾರತದ ರಾಪಾಂತರಿ ವೈರಸ್ ಸೇರಿದೆ.

ರೂಪಾಂತರಗಳು ವೈರಸ್‌ನ ಮೂಲ ಆವೃತ್ತಿಗೆ ಹೋಲಿಸಿದರೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ಹೆಚ್ಚು ಹರಡಲ್ಪಡುವ ವೈರಸ್‌ಗಳಾಗಿದ್ದು, ಕೆಲವು ಲಸಿಕೆ ರಕ್ಷಣೆಗಳನ್ನು ಭೇದಿಸಿಯೂ ಮನುಷ್ಯ ದೇಹವನ್ನು ಸೇರುವ ಸಾಮರ್ಥ್ಯ ಹೊಂದಿವೆ.
ಹೊಸ ಪ್ರಕರಣಗಳು ಮತ್ತು ಸಾವುಗಳಲ್ಲಿ ಭಾರತದಲ್ಲಿ ದಿಢೀರ್ ಉಲ್ಬಣಕ್ಕೆ ಉತ್ತೇಜನ ನೀಡುವ ಹಲವಾರು ಅಂಶಗಳಲ್ಲಿ ಬಿ.1.617 ರ ಹರಡುವಿಕೆ, ಇತರ ಹೆಚ್ಚು ಹರಡುವ ರೂಪಾಂತರಗಳ ಜೊತೆಗೆ ಕಂಡುಬರುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights