ಲಂಡನ್ ನಲ್ಲಿ ಕೊರೊನಾ 3ನೇ ಅಲೆ ಆರಂಭ : ಭಾರತದ ವಿಜ್ಞಾನಿ ಎಚ್ಚರಿಕೆ!

ಇಡೀ ವಿಶ್ವವನ್ನೇ ಬೆಂಬಿಡದೇ ಕಾಡುತ್ತಿರುವ ಕೊರೊನಾ ಒಂದು, ಎರಡು ಅಲೆ ಬಳಿಕ ಮೂರನೇ ಅಲೆಯತ್ತ ಹೆಜ್ಜೆ ಹಾಕುತ್ತಿದೆ. ಲಂಡನ್ ನಲ್ಲಿ ಕೊರೊನಾ 3ನೇ ಅಲೆ ಆರಂಭಗೊಳ್ಳುತ್ತಿದ್ದು ಭಾರತಕ್ಕಿದು ಎಚ್ಚರಿಕೆಯ ಗಂಟೆ ಎಂದು ಭಾರತೀಯ ಮೂಲದ ವಿಜ್ಞಾನಿ ಎಚ್ಚರಿಸಿದ್ದಾರೆ.

ಲಂಡನ್ ನಲ್ಲಿ ಕೊರೋನವೈರಸ್ ಮೂರನೇ ಅಲೆ ಆರಂಭಿಕ ಹಂತದಲ್ಲಿದೆ ಎಂದು ಬ್ರಿಟಿಷ್ ಸರ್ಕಾರಕ್ಕೆ ಸಲಹೆ ನೀಡುವ ಖ್ಯಾತ ಭಾರತೀಯ ಮೂಲದ ವಿಜ್ಞಾನಿ ಎಚ್ಚರಿಸಿದ್ದಾರೆ. ಜೂನ್ 21 ರಂದು ಯುಕೆಯಲ್ಲಿ ಲಾಕ್ ಡೌನ್ ಪೂರ್ಣಗೊಳಿಸಲು ನಿರ್ಧರಿಸಿದ್ದ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಪುನಃ ಲಾಕ್ ಡೌನ್ ವಿಸ್ತರಿಸಲು ವಿಜ್ಞಾನಿ ಒತ್ತಾಯಿಸಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ರವಿ ಗುಪ್ತಾ ಅವರು ಯುಕೆ ಸರ್ಕಾರದ ವೈರಸ್ ಥ್ರೆಟ್​ ಅಡ್ವೈಸರಿ ಗ್ರೂಫ್​ನ ಸದಸ್ಯರಾಗಿದ್ದು, ದೇಶದಲ್ಲಿ ಕೋವಿಡ್​ ಹೊಸ ಪ್ರಕರಣಗಳು ಕಡಿಮೆಯಾಗಿದೆಯಾದರೂ ವೈರಸ್​​ನ B.1.617 ರೂಪಾಂತರವು ಉಲ್ಬಣಿಸುತ್ತಿದೆ ಎಂದು ಬಿಬಿಸಿ ವರದಿ ಮಾಡಿರುವುದಾಗಿ ತಿಳಿಸಿದ್ದಾರೆ.

ಭಾನುವಾರ, ಅಮೇರಿಕ ಸತತ ಐದನೇ ದಿನಕ್ಕೆ 3,000 ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕುಗಳನ್ನು ವರದಿ ಮಾಡಿದೆ. ಇದಕ್ಕೂ ಮೊದಲು, ಯುಕೆ ಏಪ್ರಿಲ್ 12 ರಿಂದ ಈ ಸಂಖ್ಯೆಯನ್ನು ಮೀರಿರಲಿಲ್ಲ.

ಗುಪ್ತಾ ಪ್ರಧಾನ ಮಂತ್ರಿ ಜಾನ್ಸನ್‌ರನ್ನು ಜೂನ್ 21 ರಂದು ದೇಶವನ್ನು ಪುನಃ ತೆರೆಯಲು ಕೆಲವು ವಾರಗಳ ವಿಳಂಬ ಮಾಡುವಂತೆ ಕರೆ ನೀಡಿದರು. ಅಮೇರಿಕಾದ ಒಟ್ಟಾರೆ ಕೋವಿಡ್-19 ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಪ್ರಸ್ತುತ ಕ್ರಮವಾಗಿ 4,499,939 ಮತ್ತು 128,043 ರಷ್ಟಿದೆ. 42,89,486 ಮಂದಿ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ.

ಕೊರೊನಾ ಮೊದಲನೇ ಅಲೆಯ ಆರ್ಭಟ ಕಡಿಮೆಯಾಗುತ್ತಿದ್ದಂತೆಯೇ ವೈರಸ್​ ಅನ್ನೇ ಹೊಡೆದೋಡಿಸಿದೆವು ಎಂದು ಗೆದ್ದು ಬೀಗಿದ್ದ ಭಾರತಕ್ಕೆ 2ನೇ ಅಲೆಯು ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿತ್ತು. ಈಗಾಗಲೇ ತಜ್ಞರು ಮೂರನೇ ಅಲೆಯು ಬರಲಿದೆ ಹಾಗೂ ಅದು ಮತ್ತಷ್ಟು ಗಂಭೀರವಾಗಿರಲಿದೆ ಎಂದು ತಿಳಿಸಿದ್ದು, ಇದೀಗ ಬ್ರಿಟನ್​ನಲ್ಲಿ 3ನೇ ಅಲೆ ಆರಂಭವು ಭಾರತಕ್ಕೆ ಎಚ್ಚರಿಕೆಯ ಘಂಟೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights