ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರ – ಸಿಎಂ ಘೋಷಣೆ!

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರವನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, “ಸೋಂಕಿನಿಂದ ದುಡಿಯುವಂತ ವ್ಯಕ್ತಿಗಳು ಮೃತಪಟ್ಟು ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿ ಬೀದಿ ಪಾಲಾಗಿವೆ. ಇದನ್ನು ಮನಗೊಂಡು ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ವಯಸ್ಕರು ಮೃತಪಟ್ಟಿದ್ದರೆ, ಅಂಥಹ ಒಂದು ಕುಟುಂಬದಲ್ಲಿ ಒಬ್ಬರಿಗೆ 1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ” ಎಂದು ಹೇಳಿದ್ದಾರೆ.

ಬಿಪಿಎಲ್ ಕುಟುಂಬಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ದುಡಿಯುವಂತ ವ್ಯಕ್ತಿಯನ್ನು ಕೊರೊನಾದಿಂದ ಕುಟುಂಬ ಕಳೆದುಕೊಂಡಿದ್ದರೆ. ಜೊತೆಗೆ ಆ ಕುಟುಂಬ ಸಂಪೂರ್ಣವಾಗಿ ಮೃತ ವ್ಯಕ್ತಿಯ ಮೇಲೆ ಅವಲಂಬಿತವಾಗಿದ್ದರೆ, ಅಂತಹ ಒಂದು ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡಲಾಗುತ್ತದೆ.

ಇನ್ನೂ ಮಂಡ್ಯ ಹಾಲು ಒಕ್ಕೂಟದಲ್ಲಿ ನೀರು ಬಳಕೆ ಮಾಡಿ ದುರುಪಯೋಗ ವಿಚಾರವಾಗಿ ಮಾತನಾಡಿದ ಸಿಎಂ,” ಪ್ರಾಥಮಿಕ ತನಿಖೆ ವಹಿಸಲಾಗಿದೆ. 5 ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೇಲೆ ಸಿಐಡಿಯಿಂದ ವಿಚಾರಣೆ ಮಾಡಲಾಗುತ್ತದೆ” ಎಂದು ಹೆಳಿದ್ದಾರೆ.

ಇನ್ನೂ ಭೀಕರ್ ಅಪಘಾತದಿಂದ ಸಂಚಾರಿ ವಿಜಯ್ ಅಗಲಿಕೆಗೆ ಸಿಎಂ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆ ನೋವನ್ನು ಭರಿಸುವಂತ ಶಕ್ತಿ ವಿಜಯ್ ಕುಟುಂಬಸ್ಥರಿಗೆ ಮತ್ತು ಅವರ ಆಪ್ತರಿಗೆ ನೀಡಲು ದೇವರಲ್ಲಿ ಪ್ರಾರ್ಥನೆ ಮಾಡಿದರು.

 

Spread the love

Leave a Reply

Your email address will not be published. Required fields are marked *