ಲಾಕ್‌ಡೌನ್‌ ವೇಳೆ ಬೆಂಗಳೂರಿನಲ್ಲಿ ವಸೂಲಾಗಿದ್ದು ಬರೋಬ್ಬರಿ 4.54 ಕೋಟಿ ರೂ. ದಂಡ!

ಕೊರೊನಾ 2ನೇ ಅಲೆಯ ವೇಳೆ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಜನರಿಂದ ಬೆಂಗಳೂರು ಪೊಲೀಸರು ಬರೋಬ್ಬರಿ ಒಟ್ಟು 4.54 ಕೋಟಿ ರೂಗಳನ್ನು ದಂಡವನ್ನು ವಸೂಲಿ ಮಾಡಿದ್ದಾರೆ.

ಕಟ್ಟುನಿಟ್ಟಿನ ನಿಯಮಗಳು ಜಾರಿಯಿದ್ದ ಬೆಂಗಳೂರಿನಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕಲಾಗುತ್ತಿತ್ತು. ಇದಕ್ಕಾಗಿ ಬೆಂಗಳೂರು ನಗರ ಪೊಲೀಸರು ಪ್ರತಿಯೊಂದು ವಿಭಾಗದಲ್ಲಿಯೂ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದ ಜನರಿಂದ ದಂಡವನ್ನು ಸಂಗ್ರಹ ಮಾಡಿದ್ದಾರೆ.

ಈ ಪೈಕಿ, ಮಾಸ್ಕ್ ಧರಿಸಿದ 1.52 ಲಕ್ಷ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ 34 ಸಾವಿರ ಜನರಿಗೆ ದಂಡವನ್ನು ಹಾಕಲಾಗಿದೆ. ಅಲ್ಲದೆ, ನಿಯಮ ಉಲ್ಲಂಘಿಸಿ ರಸ್ತೆಗಳಿದಿದ್ದ 49,024 ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಅವುಗಳಿಗೂ ದಂಡ ವಿಧಿಸಿದ್ದು, ಒಟ್ಟು 4.54 ಕೋಟಿ ರೂಗಳಷ್ಟು ದಂಡ ವಸೂಲಿ ಮಾಡಲಾಗಿದೆ.

ಜಪ್ತಿಯಾಗಿದ್ದ ವಾಹನಗಳ ಪೈಕಿ, 43,615 ದ್ವಿಚಕ್ರ ವಾಹನ, 2,326 ಮೂರು ಚಕ್ರದ ವಾಹನಗಳು ಮತ್ತು 3,083 ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಜೂನ್‌ 14ರಿಂದ ಬೆಂಗಳೂರಿನಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ನಿಯಮಗಳನ್ನು ಸಡಿಲ ಮಾಡಲಾಗಿದೆ. ಬೆಳಗ್ಗೆ ವಾಯುವಿಹಾರಕ್ಕಾಗಿ ಪಾರ್ಕ್‌ಗಳನ್ನು ತೆರೆಯಲಾಗಿದೆ. ಸರ್ಕಾರಿ ಕಚೇರಿ, ಗಾರ್ಮೆಂಟ್ಸ್‌ ಶೇ 50ರಷ್ಟು ಸಿಬ್ಬಂದಿ ಜೊತೆ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ಆದರೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಸಂಚಾರ ಇನ್ನೂ ಆರಂಭವಾಗಿಲ್ಲ.

ಜೂನ್ 21ರಿಂದ ಬೆಂಗಳೂರು ನಗರ ಸಂಪೂರ್ಣ ಅನ್‌ಲಾಕ್ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊರೊನಾ 3ನೇ ಅಲೆ; ಹೆಚ್ಚಲಿವೆ ಸಾವು-ನೋವುಗಳ ಸಂಖ್ಯೆ; ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆಗೆ ತಜ್ಞರ ಸಲಹೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights