ಅಕ್ರಮ ವೇಶ್ಯಾವಾಟಿಕೆ: 16 ಪುರುಷರು, 12 ಮಹಿಳೆಯರು ಬಂಧನ!

ಉತ್ತರ ಪ್ರದೇಶದ ನೋಯ್ಡಾ ನಗರದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ವೇಶ್ಯಾವಾಟಿಕೆ ಆರೋಪದಡಿ 12 ಮಹಿಳೆಯರು ಸೇರಿದಂತೆ 28 ಜನರನ್ನು ಬಂಧಿಸಿದ್ದಾರೆ ಎಂದು ನೋಯ್ಡಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೆಕ್ಟರ್ 51 ರಲ್ಲಿನ ಮನೆಯಲ್ಲಿ ಅಕ್ರಮ ವೇಷ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಪೊಲೀಸರು ಆ ಮನೆಯ ಮೇಲೆ ದಾಳಿ ನಡೆಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ತಿಳಿಸಿದ್ದಾರೆ.

ದಾಳಿಯ ವೇಳೆ 16 ಪುರುಷರು ಮತ್ತು 12 ಮಹಿಳೆಯರನ್ನು ಬಂಧಿಸಲಾಗಿದೆ” ಎಂದು ಸಿಂಗ್ ಹೇಳಿದ್ದಾರೆ.

ದಾಳಿ ನಡೆಸಿದ ತಂಡಗಳಲ್ಲಿ ಸಹಾಯಕ ಪೊಲೀಸ್ ಆಯುಕ್ತರು, ಸ್ಥಳೀಯ ಪೊಲೀಸ್ ಠಾಣೆ ಉಸ್ತುವಾರಿ, ಮಹಿಳಾ ಠಾಣಾ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಅಧಿಕಾರಿಗಳು ಇದ್ದರು ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ಕಾನೂನು ಕ್ರಮಗಳನ್ನು ಆರಂಭಿಸಲಾಗುವುದು ಎಂದು ಸಿಂಗ್ ಹೇಳಿದರು.

ಇದನ್ನೂ ಓದಿ: ಭಾರತದಲ್ಲಿ 40,845 ಜನರಿಗೆ ಬ್ಲಾಕ್‌ ಫಂಗಸ್‌; ತುತ್ತಾದವರಲ್ಲಿ ಶೇ.85 ರಷ್ಟು ಕೊರೊನಾ ರೋಗಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights