ಸಂಕಷ್ಟ ಹೇಳಿಕೊಳ್ಳಲು ಹೋದ ಜನ; ಏನಾದ್ರು ಮಾಡಿಕೊಂಡು ಸತ್ತೋಗಿ ಎಂದು ದರ್ಪ ಮೆರೆದ ಸಚಿವ!

ಕೊರೊನಾದಿಂದ ಬದುಕು ದುಸ್ಥರವಾಗಿದೆ. ಶಾಲೆಗಳು ನಡೆಯುತ್ತಿಲ್ಲ. ಆದರೂ, ಖಾಸಗೀ ಶಾಲೆಗಳು ಶುಲ್ಕವನ್ನು ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಶಾಲಾಮಕ್ಕಳ ಪೋಷಕರು ಸಚಿವರಿಗೆ ದೂರು ನೀಡಲು ಹೋಗಿದ್ದಾರೆ. ಈ ವೇಳೆ ಪೋಷಕರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿರುವ ಸಚಿವ, ‘ಏನಾದ್ರು ಮಾಡಿಕೊಂಡು ಸಾಯ್ರಿ’ ಎಂದು ಹೇಳಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ಅವರ ನಿವಾಸಕ್ಕೆ ಸುಮಾರು 100 ಜನ ಪೋಷಕರು ಖಾಸಗಿ ಶಾಲೆಗಳ ವಿರುದ್ದ ದೂರು ನೀಡಲು ತೆರಳಿದ್ದರು. ಈ ವೇಳೆ ಸಚಿವ ಆ ಪೋಷಕರು ನಿಂದಿಸಿ ವಾಪಸ್‌ ಕಳಿಸಿರುವ ಘಟನೆ ನಡೆದಿದೆ.

ಹೆಚ್ಚು ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶವನ್ನೂ ಮೀರಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮ ತೆಗೆದುಕೊಂಡಿಲ್ಲ. ನಾವು ಏನು ಮಾಡಬೇಕು ಎಂದು ಪೋಷಕರು ಸಚಿವರ ಎದುರು ಅಳಲು ತೋಡಿಕೊಂಡಿದ್ದಾರೆ. ಈ ವೇಳೆ, ‘ಏನಾದ್ರು ಮಾಡಿಕೊಂಡು ಸಾಯ್ತಿ ಹೋಗಿ’ ಎಂದು ಸಚಿವ ಹೇಳಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿದ್ದಾರೆ.

ಶಿಕ್ಷಣ ಸಚಿವರಾದವರು ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ, ಈ ರೀತಿ ಉಡಾಫೆಯಾಗಿ ಮಾತನಾಡಿದ್ದು ಸರಿಯಲ್ಲ ಎಂದು ಪೋಷಕರು ಅವರ ಮನೆ ಮುಂದೆಯೇ ಧರಣಿ ಕುಳಿತಿದ್ದಾರೆ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜನರನ್ನು ಸುಲಿಗೆ ಮಾಡುತ್ತಿದೆ ಎಸ್‌ಬಿಐ ಬ್ಯಾಂಕು; ವಿವಿಧ ರೀತಿಯ ಶುಲ್ಕ – ಜಿಎಸ್‌ಟಿ ಜಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights