Bigg Boss : ಚಕ್ರವರ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಿಯಾಂಕ…!

ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಹಾಗೂ ಪ್ರಿಯಾಂಕ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ. ಕೋಪಗೊಂಡ ಪ್ರಿಯಾಂಕ ಚಕ್ರವರ್ತಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಹೌದು… ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಚಕ್ರವರ್ತಿ ಹಾಗೂ ಪ್ರಶಾಂತ್ ಅವರೊಂದಿಗೆ ಹೆಚ್ಚು ಮಾತನಾಡಿಕೊಂಡಿದ್ದ ಪ್ರಯಾಂಕ ಸದ್ಯ ಬದಲಾಗಿದ್ದಾಳೆ. ಪ್ರಿಯಾಂಕ ನಾಟಕವಾಡುತ್ತಿದ್ದಾಳೆ. ಶಮಂತನೊಂದಿಗೆ ಸಲೀಗೆಯಿಂದ ಇರುತ್ತಾಳೆ. ನಾವು ಏನಾದ್ರು ವಿಶ್ ಮಾಡಿ ಮಾತನಾಡಿದರೆ ಅವಳಿಗೆ ಕೋಪ ಬರುತ್ತೆ, ಆದರೆ ಶಮಂತ್ ಅದನ್ನ ಮಾಡಿದರೆ ಏನೂ ಅನ್ಸೋದಿಲ್ಲ ಅನ್ನೋದು ಚಕ್ರವರ್ತಿ ವಾದ.

ವೀಕೆಂಡ್ ವಿತ್ ಸುದೀಪ್ ಜೊತೆ ಚಕ್ರವರ್ತಿ ಇದೇ ರೀತಿ ಹೇಳಿಕೆಗಳನ್ನ ಅಪಾದನೆಗಳನ್ನ ಪ್ರಿಯಾಂಕ ಮೇಲೆ ಮಾಡಿದ್ರು. ಆದರೆ ಪ್ರಿಯಾಂಕಾ ಮಾತ್ರ ಈ ಮಾತುಗಳನ್ನ ಒಪ್ಪಿಕೊಳ್ಳಲೇ ಇಲ್ಲ. ಬೇಸರದಿಂದ ಕಣ್ಣೀರು ಹಾಕಿದ್ರು. ಈ ವೇಳೆಯೂ ಚಕ್ರವರ್ತಿ ಕಣ್ಣೀರು ಹಾಕುತ್ತಾ ನಾಟವಾಡುತ್ತಿದ್ದಾಳೆನ್ನುವ ಮಾತು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಕೋಪಗೊಂಡ ಪ್ರಿಯಾಂಕಾ ‘ನಾನು ಏನಾದ್ರು ಮಾಡುತ್ತೇನೆ ಮಾತನಾಡುತ್ತೇನೆ ಅದನ್ನ ಕೇಳಲು ನೀವು ಯಾರು’ ಎನ್ನುವ ಪ್ರಶ್ನೆ ಹಾಕಿದ್ದಾರೆ. ಮತ್ತೊಮ್ಮ ತಮ್ಮ ಬಗ್ಗೆ ಮಾತನಾಡದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಪ್ರಿಯಾಂಕ ಅವರಿಗೆ ಚಕ್ರವರ್ತಿ ಮೇಲಿನ ಕೋಪ ಬೂದಿ ಮುಚ್ಚಿದ ಕೆಂಡದಂತಿದ್ದು ಮತ್ತೆ ಸ್ಟೋಟಗೊಳ್ಳುವ ಸಾಧ್ಯತೆ ಕೂಡ ಇದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights