ದೇಶದಲ್ಲಿ 42,766 ಹೊಸ ಕೊರೊನಾ ಕೇಸ್ : 1,206 ಜನ ಬಲಿ..!
ದೇಶದಲ್ಲಿ ಹೊಸದಾಗಿ 42,766 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸಾವಿನ ಸಂಖ್ಯೆ ಅಧಿಕವಾಗಿದೆ. ಕಳೆದ 24 ಗಂಟೆಯಲ್ಲಿ 1,206 ಜನ ಮಹಾಮಾರಿಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳು 3,694 ರಷ್ಟು ಕಡಿಮೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,55,033 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 45,254 ರೋಗಿಗಳು ಸಹ ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2,99,33,538 ಕ್ಕೆ ತಲುಪಿದೆ.
ಶನಿವಾರ ಗರಿಷ್ಠ ದೈನಂದಿನ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ಕೇರಳದಲ್ಲಿ 13,563 ಪ್ರಕರಣಗಳು, ಮಹಾರಾಷ್ಟ್ರ 8,992 ಪ್ರಕರಣಗಳು, ಆಂಧ್ರಪ್ರದೇಶ 3,040 ಪ್ರಕರಣಗಳು, ತಮಿಳುನಾಡು 3,039 ಪ್ರಕರಣಗಳು ಮತ್ತು ಒಡಿಶಾದಲ್ಲಿ 2,806 ಪ್ರಕರಣಗಳು ದಾಖಲಾಗಿವೆ.
ಶನಿವಾರ, ಮಹಾರಾಷ್ಟ್ರದಲ್ಲಿ (738) ಗರಿಷ್ಠ ಕೋವಿಡ್ ಸಾವುನೋವುಗಳು ವರದಿಯಾಗಿದ್ದು, ಕೇರಳದಲ್ಲಿ 130 ದೈನಂದಿನ ಸಾವುಗಳು ಸಂಭವಿಸಿವೆ.
ಭಾರತದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈವರೆಗೆ ಒಟ್ಟು 42.9 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಕೋವಿಡ್ -19 ಗಾಗಿ 19,55,225 ಮಾದರಿಗಳನ್ನು ಪರೀಕ್ಷಿಸಲಾಯಿತು.
ವ್ಯಾಕ್ಸಿನೇಷನ್ ಡ್ರೈವ್
ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ, ಇದುವರೆಗೆ 37.21 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 30,55,802 ಲಸಿಕೆ ಪ್ರಮಾಣವನ್ನು ನೀಡಲಾಗಿದೆ.

