ಮಂಡ್ಯ ಗಣಿ ಸಮರ : ಪರೋಕ್ಷವಾಗಿ ಸುಮಲತಾಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್…!

ಮಂಡ್ಯ ಗಣಿಗಾರಿಕೆ ವಿಚಾರಕ್ಕೆ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಕ್ಸಮರ ಕಳೆದ ಕೆಲ ದಿನಗಳಿಂದ ನಡೆಯುತ್ತಲೇ ಇದೆ. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸುಮಲತಾಗೆ ಟಾಂಗ್ ಕೊಟ್ಟಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ” ಮಂಡ್ಯ ಗಣಿ ವಿವಾದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನೂ ಕೂಡ ಮಂಡ್ಯಕ್ಕೆ ಭೇಟಿ ಕೊಟ್ಟಿದ್ದೇನೆ. ಆದರೆ ಕೆಆರ್ ಎಸ್ ಬಿರುಕುಬಿಟ್ಟಿರುವ ಬಗ್ಗೆ ಯಾರೂ ಕೂಡ ನನ್ನ ಬಳಿ ಪ್ರಸ್ತಾಪಿಸಿಲ್ಲ. ಸುಮಲತಾ ಹೇಳಿಕೆ ಕನ್ನಂಬಾಡಿ ಬಳಿ ವಾಸಿಸುವ ಜನರಲ್ಲಿ ಆರಂಕ ಮೂಡಿಸಿದೆ. ಹಾಗೊಂದು ವೇಳೆ ಕೆಆರ್ ಎಸ್ ಬಿರುಕು ಬಿಟ್ಟಿದ್ದರೆ ಅದನ್ನ ನೋಡಿಕೊಳ್ಳಲು ಸರ್ಕಾರ ಇದೆ. ಅಲ್ಲಿನ ಇಂಜಿನೀಯರ್ ಗಳು ಅದನ್ನ ನೋಡಿಕೊಳ್ಳುತ್ತಾರೆ. ಆದರೆ ಹೀಗೆ ಸಾರ್ವಜನಿಕವಾದ ಹೇಳಿಕೆಗಳು ಜನರಲ್ಲಿ ಆತಂಕ ಮೂಡಿಸಿವೆ” ಎಂದು ಕುಟುಕಿದ್ದಾರೆ.

ನಾನು ಕೂಡ ಕೆಲವು ದಿನ ಮಂಡ್ಯದ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಕೆಆರ್ ಎಸ್ ಬಿರುಕು ಬಿಟ್ಟಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ಜವಬ್ದಾರಿಯುತವಾದ ಸ್ಥಾನದಲ್ಲಿರುವವರು ಹೀಗೆ ಹೇಳಿಕೆ ಕೊಡುವುದರಿಂದ ಅಲ್ಲಿನ ಜನ ನಮ್ಮ ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ. ಡ್ಯಾಂ ನ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ಇಂಥಹ ಹೇಳಿಕೆಗಳು ಆತಂಕವನ್ನು ಹೆಚ್ಚಿವೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.