ಮೆಟ್ರೋ ಪ್ರಯಾಣಿಕರಿಗೆ ದಂಡದ ಭಯ; ಬೆಂಗಳೂರಲ್ಲಿ 1.7 ಲಕ್ಷ ದಂಡ ವಸೂಲಿ ಮಾಡಿದ ಮೆಟ್ರೋ!

ರಾಜ್ಯ ರಾಜಧಾನಿ ಬೆಂಗಳೂರಿನ ಮೆಟ್ರೋ ರೈಲು ಒಳಗೆ ಹಾಗೂ ನಿಲ್ದಾಣಗಳಲ್ಲಿ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘನೆ ಮಾಡುವವರಿಗೆ BMRCL ಭಾರೀ ದಂಡ ವಿಧಿಸುತ್ತಿದ್ದು, ಇದೂವರೆಗೂ 1,77,250 ರೂ ದಂಡ ವಸೂಲಿ ಮಾಡಿದೆ.

ಮೆಟ್ರೋಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ಮೇಲೆ ಕಣ್ಣಿಟ್ಟು ದಂಡ ಕಟ್ಟಿಸಿಕೊಳ್ಳಲಾಗ್ತಿದೆ. ಮೆಟ್ರೋದಲ್ಲಿ ಫೇಸ್ ಮಾಸ್ಕ್,ಸಾಮಾಜಿಕ ಅಂತರ ಕಡ್ಡಾಯವಾಗಿ ಧರಿಸಲೇ ಬೇಕು. ಈ ರೀತಿ ಯಾವುದೇ ಕೋವಿಡ್ ರೂಲ್ಸ್ ಉಲ್ಲಂಘನೆ ಮಾಡಿದರೆ ದಂಡ ಬೀಳುವುದು ಪಕ್ಕಾ. ಇದಕ್ಕಂತಲೇ ವಿಶೇಷ ತಂಡ ರಚನೆ ಮಾಡಲಾಗಿದ್ದು, ನಗರದ ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಈ ತಂಡ ಕಾರ್ಯಾಚರಿಸುತ್ತಿದೆ. ಜುಲೈ 5ರ ನಂತರ ಸಂಪೂರ್ಣ ಅನುಮತಿಯೊಂದಿಗೆ ನಮ್ಮ ಮೆಟ್ರೋ ಆರಂಭಗೊಂಡ ಮೇಲೆ ಈ ತಂಡ ಸಾಲು ಸಾಲಾಗಿ ದಂಡ ಕಟ್ಟಿಸಿಕೊಂಡಿದೆ.

ಯಾವ ಪ್ರಯಾಣಿಕರು CAB (Covid Appropriate Behavior) ನಿಯಮ ಉಲ್ಲಂಘನೆ ಮಾಡುತ್ತಾರೋ ಅಂಥವರಿಗೆ 250 ರೂ ದಂಡ ವಿಧಿಸಲಾಗುತ್ತಿದೆ. ಹೀಗೆ ಕಳೆದ ಒಂದು ವಾರದಿಂದ ಪ್ರಯಾಣಿಕರ ಮೇಲೆ ನಮ್ಮ ಮೆಟ್ರೋ ದಂಡಾಸ್ತ್ರ ಪ್ರಯೋಗ ಮಾಡುತ್ತಿದೆ. ಮೆಟ್ರೋದಲ್ಲಿ ಶೇ 100 ರಷ್ಟು ಪ್ರಯಾಣಿಕರಿಗೆ ಅನುಮತಿ ನೀಡಿದ ಬಳಿಕ ಸುಮಾರು 1 ಲಕ್ಷಕ್ಕೂ ಅಧಿಕ ದಂಡ ಕಳೆದೊಂದು ವಾರದಲ್ಲಿ ಶೇಖರಿಸಲಾಗಿದೆ. ಸರಿಯಾಗಿ ಕಳೆದೊಂದು ವಾರದಲ್ಲಿ ಕೋವಿಡ್ ರೂಲ್ಸ್ ಉಲ್ಲಂಘನೆ ಮಾಡಿದ ಪ್ರಯಾಣಿಕರಿಂದ 1 ಲಕ್ಷ 77 ಸಾವಿರದ 250 ರೂ ವಸೂಲಿ ಮಾಡಲಾಗಿದೆ.

ಪ್ರತಿನಿತ್ಯ ಮೆಟ್ರೋ ಪ್ರಯಾಣಿಕರಿಂದ ಸರಾಸರಿ 25 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗುತ್ತಿದೆ. ಕೇವಲ ಮೆಟ್ರೋ ನಿಲ್ದಾಣದಲ್ಲಿ ಮಾತ್ರವಲ್ಲ ರೈಲಿನೊಳಗೆ ಸಂಚಾರ ಮಾಡುವಾಗು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿಯೇ ಪ್ರಯಾಣಿಸಬೇಕು. ಇಲ್ಲದಿದ್ದರೆ ಸ್ಪಾಟಲ್ಲೇ ದಂಡ ಖಚಿತ.

ನಮ್ಮ ಮೆಟ್ರೋದಲ್ಲಿ ನಿತ್ಯ ಎಷ್ಟೆಷ್ಟು ದಂಡ ಸಂಗ್ರಹ.!!

05/07/2021  –  ₹ 20,950/-

06/07/2021  –  ₹ 25,950/-

07/07/2021  –  ₹ 28,350/-

08/07/2021  –  ₹ 33,550/-

09/07/2021  –  ₹ 36,850/-

10/07/2021  –  ₹ 31,600/-

ಒಟ್ಟು ವಸೂಲಾದ ದಂಡದ ಮೊತ್ತ –  ₹ 1,77,250/

ಇದನ್ನೂ ಓದಿ: ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡರೆ, ಅವರ ರೆಕ್ಕೆಯನ್ನಲ್ಲ – ತಲೆಯನ್ನೇ ತೆಗೆಯುತ್ತೇನೆ: ನಟ ದರ್ಶನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights