‘ಸಿಎಂ ಸ್ಥಾನಕ್ಕಾಗಿ 2000 ಕೋಟಿ ಕೊಡುತ್ತೇನೆಂದು ದೆಹಲಿಗೆ ತೆರಳಿದ್ರು’ – ಮತ್ತೆ ಗುಡುಗಿದ ಯತ್ನಾಳ್!

‘ಸಿಎಂ ಸ್ಥಾನಕ್ಕಾಗಿ 2000 ಕೋಟಿ ಕೊಡುತ್ತೇನೆಂದು ದೆಹಲಿಗೆ ಹೋಗ್ತಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೆ ಪಕ್ಷದ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರದ್ದು ಎನ್ನಲಾದ ಆಡಿಯೋ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್, “ಸಿಎಂ ಸ್ಥಾನಕ್ಕಾಗಿ 2000 ಕೋಟಿ ಕೊಡುತ್ತೇನೆಂದು ದೆಹಲಿಗೆ ಹೋಗ್ತಾರೆ. ಹಾಗೇ ಹೋದರೆ ಕಪಾಳಕ್ಕೆ ಹೊಡೆದು ಕಳುಸುತ್ತಾರೆ. ಯಾಕೆಂದ್ರೆ ಈ ಬಾರಿ ಮೋದಿ ಸಿಎಂ ಬದಲಾವಣೆಗೆ ನಿರ್ಧರಿಸಿದ್ದಾರೆ” ಎಂದಿದ್ದಾರೆ.

ಸಿಎಂ ಯಡಿಯೂರಪ್ಪ ನವರ ದಿಢೀರ್ ದೆಹಲಿ ಪ್ರಯಾಣ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಜೀವ ತುಂಬಿತ್ತು. ಆದರೆ ಆಡಳಿತ ಪಕ್ಷದಲ್ಲಿ ಇದು ನಾಯಕತ್ವದ ಬದಲಾವಣೆ ವಿಚಾರವಾಗಿ ನೀಡಿದ ಭೇಟಿಯಲ್ಲ ಎಂದು ಹೇಳಿದರೂ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ “ದೆಹಲಿಗೆ ಹೋಗುವಾಗ ಯಡಿಯೂರಪ್ಪ 6 ಬ್ಯಾಗ್ ಗಳನ್ನು ತೆಗೆದುಕೊಂಡು ಹೋದ್ರು. ಅದ್ರಲ್ಲೇನಿತ್ತು ಅವರೇ ಹೇಳಬೇಕು” ಎಂದು ವ್ಯಂಗ್ಯ ಮಾಡಿದ್ದರು. ಈ ಹೇಳಿಕೆಗೆ ಪುಷ್ಠಿ ನೀಡುವಂತೆ ಯತ್ನಾಳ್ ‘ಸಿಎಂ ಸ್ಥಾನಕ್ಕಾಗಿ 2000 ಕೋಟಿ ಕೊಡುತ್ತೇನೆಂದು ದೆಹಲಿಗೆ ಹೋಗ್ತಾರೆ” ಎಂದು ಹೇಳಿದ್ದಾರೆ.

ಹಾಗಾದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದಂತೆ ದೆಹಲಿಗೆ ಹೊಗುವಾಗ ಸಿಎಂ ಯಡಿಯೂರಪ್ಪ ತೆಗೆದುಕೊಂಡು ಹೋದ 6 ಬ್ಯಾಗ್ ನಲ್ಲಿ ಯತ್ನಾಳ್ ಹೇಳಿದ 2000 ಕೋಟಿ ಇತ್ತಾ ಅನ್ನೋ ಅನುಮಾನ ಶುರುವಾಗಿದೆ.

ಒಟ್ಟಿನಲ್ಲಿ ನಳೀನ್ ಕಟೀಲ್ ಅವರದ್ದು ಎನ್ನಲಾದ ಆಡಿಯೋದಿಂದ ಜುಲೈ 26 ಕ್ಕೆ ಸಿಎಂ ಬದಲಾವಣೆ ಖಚಿತ ಎಂದು ಹೇಳಲಾಗುತ್ತಿದ್ದು ಕೇಸರಿ ಮನೆಯಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights