ಯುಪಿ ಚುನಾವಣೆ 2022: ಸಮಾಜವಾದಿ ಪಕ್ಷ 400 ಸ್ಥಾನಗಳನ್ನು ಗೆಲ್ಲಬಹುದು; ಬಿಜೆಪಿ ಅಭ್ಯರ್ಥಿಗಳನ್ನೇ ಕಾಣದಿರಬಹುದು:ಅಖಿಲೇಶ್ ಯಾದವ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾವು 400 ಸ್ಥಾನಗಳನ್ನು ಗೆಲ್ಲಬಹುದು. ಆದರೆ, ಬಿಜೆಪಿಯು ಚುನಾವಣಗೆ ಅಭ್ಯರ್ಥಿಗಳನ್ನು ಹುಡುಕುವ ಪರಿಸ್ಥಿತಿಯಲ್ಲಿದೆ. ಯಾವ ಅಭ್ಯರ್ಥಿಯೂ ಬಿಜೆಪಿಯಿಂದ ಟಿಕೆಟ್‌ ಕೇಳುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದೋಗ ಸೇರಿದಂತೆ ವಿವಿಧ ಸಮಸ್ಯಗಳ ವಿರುದ್ದ ಸಮಾಜವಾದಿ ಪಕ್ಷವು ಲಕ್ನೋದಲ್ಲಿ ಗುರುವಾರ ‘ಸೈಕಲ್‌ ಜಾತ್ರಾ’ ನಡೆಸಿದೆ. ಈ ವೇಳೆ ಮಾತನಾಡಿದ ಯಾದವ್‌, “ಈ ಮೊದಲು ನಾವು 350 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದೆ. ಆದರೆ ಜನರ ಕೋಪ ಮತ್ತು ಮನಸ್ಥಿತಿಯನ್ನು ನೋಡಿದರೆ, ನಾವು ಈಗ 400 ಸ್ಥಾನಗಳನ್ನು ಗೆಲ್ಲಬಹುದು ಎಂದು ನಾನು ಹೇಳಬಲ್ಲೆ” ಎಂದು ಹೇಳಿದ್ದಾರೆ.

ಇಂದು ಬಿಜೆಪಿಯು ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದ ಪರಿಸ್ಥಿತಿಯಲ್ಲಿದೆ. ಯಾರೂ ಕೂಡ ಬಿಜೆಪಿಯಿಂದ ಟಿಕೆಟ್‌ ಕೇಳುವುದಿಲ್ಲ. ಕೊರೊನಾ ವಿಚಾರದಲ್ಲಿ ಯೋಗಿ ಸರ್ಕಾರದ ದುರಾಡಳಿತವನ್ನು ಕಂಡು ಜನರು ಕೋಪಗೊಂಡಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೊರೊನಾ ರೋಗಿಗಳಿಗೆ ಆಮ್ಲಜನಕ ಮತ್ತು ಔಷಧಿಗಳನ್ನು ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರ ಜನರನ್ನು ಸಾಯುವಂತೆ ಮಾಡಿತು. ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೂ ಸರ್ಕಾರ ಸಹಾಯ ಮಾಡಲಿಲ್ಲ. ಕೊರೊನಾ 2ನೇ ಅಲೆಗೆ ಬಲಿಯಾದವರಿಗೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಪಂಜಾಬ್ ಸಿಎಂ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ!

ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅಪರಾಧಿಗಳನ್ನು ಸೇರಿಸಿಕೊಳ್ಳುತ್ತಿದೆ. ಬಿಜೆಪಿ ತನ್ನ 2017 ರ ಚುನಾವಣಾ ಪ್ರಣಾಳಿಕೆಯನ್ನು ಇನ್ನೂ ಓದಿಲ್ಲ ಮತ್ತು ಬದಲಾಗಿ ‘ಮನಿ-ಫೆಸ್ಟೋ’ ಮೇಲೆ ಕೇಂದ್ರೀಕರಿಸಿದೆ ಎಂದು ಯಾದವ್ ಟೀಕಿಸಿದ್ದಾರೆ.

ಗಂಗಾ ನದಿಯಲ್ಲಿ ತೇಲಿದ ಮೃತ ದೇಹಗಳು, ಅಪೌಷ್ಟಿಕ ಮಕ್ಕಳ ಸಂಖ್ಯೆ, ಕಸ್ಟಡಿ ಸಾವುಗಳಲ್ಲಿ ಯೋಗಿ ಸರ್ಕಾರವು ಉತ್ತರ ಪ್ರದೇಶವನ್ನು ಅಗ್ರ ರಾಜ್ಯವನ್ನಾಗಿ ಮಾಡಿದೆ ಎಂದು ಅವರು ಆರೋಪಿಸಿದರು.

ಪಿಟಿಐ ಪ್ರಕಾರ, ಸಮಾಜವಾದಿ ಪಕ್ಷವು ಅಕ್ಟೋಬರ್‌ನಲ್ಲಿ ರಾಜ್ಯದ ಸುಮಾರು 75 ಜಿಲ್ಲೆಗಳಲ್ಲಿ ‘ರಥ ಯಾತ್ರೆ’ ನಡೆಸಲು ಯೋಜಿಸಿದೆ. 403 ವಿಧಾನಸಭಾ ಕ್ಷೇತ್ರಗಳ ಪೈಕಿ 300 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯಕರ್ತರೊಂದಿಗೆ ಎಸ್ಪಿ ಸರಣಿ ಸಭೆಗಳನ್ನು ನಡೆಸಿದೆ.

ಸಮಾಜವಾದಿ ಪಕ್ಷವು ‘ಪ್ರಬುದ್ಧ ಸಮ್ಮೇಳನ’ವನ್ನು ಆರಂಭಿಸಲಿದೆ ಇದು ಬ್ರಾಹ್ಮಣ ಮತದಾರರ ವಿಶ್ವಾಸವನ್ನು ಮರಳಿ ಪಡೆಯುವ ಉದ್ದೇಶಿತ ಪ್ರಯತ್ನವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ 2023ರ ಅಂತ್ಯದಲ್ಲಿ ತೆರೆಯಲಿದೆ ರಾಮ ಮಂದಿರ! 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights