ಆಫ್ಘನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಇಲ್ಲ ಎಂದು ತಾಲಿಬಾನ್ ಘೋಷಣೆ!

ಅಫ್ಘನ್ ನನ್ನು ವಶಕ್ಕೆ ಪಡೆದ ನಂತರ ತಾಲಿಬಾನ್ ಆಫ್ಘನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಇಲ್ಲ ಎಂದು ಘೋಷಣೆ ಮಾಡಿದೆ. ಆಫ್ಘನ್ ನಲ್ಲಿ ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವಕ್ಕೆ  ಅವಕಾಶ ಇಲ್ಲ ಎಂದು ಹೇಳಿದೆ.

ದೇಶವನ್ನು ವಶಪಡಿಸಿಕೊಂಡಾಗ ತಾಲಿಬಾನಿಗಳು ಜನರಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದಿದ್ದರು. ಆಫ್ಘನ್ನರು ದೇಶ ಬಿಟ್ಟು ಹೋಗುವುದು ಬೇಡ. ನಾವು ಅವರಿಗೆ ಮೂಲಭೂತ ಹಕ್ಕುಗಳನ್ನು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ತಾಲಿಬಾನಿಗಳು ಹೇಳುವುದೇ ಒಂದು ಮಾಡುವುದೇ ಮತ್ತೊಂದು ಅನ್ನೋ ರೀತಿಯಾಗಿದೆ.

ನಿರೀಕ್ಷೆಯಂತೆ ತಾಲಿಬಾನಿಗಳು ತಮ್ಮ ಅಸಲಿಯತ್ತನ್ನ ತೋರಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬರುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಇದನ್ನು ಸದ್ಯ ತಾಲಿಬಾನೇ ಘೊಷಿಸಿದೆ. ಆಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನು ಜಾರಿಗೊಳಿಸುತ್ತೇವೆ ಎಂದು ಖುದ್ದಾಗಿ ತಾಲಿಬಾನ್ ಹೇಳಿದ್ದಾರೆ.

ಎಲ್ಲರನ್ನು ಒಳಗೊಂಡ ಸರ್ಕಾರ ರಚನೆಯಾಗಬೇಕು ಎಂದು ಬೇರೆ ಬೇರೆ ದೇಶಗಳು ತಾಲಿಬಾನಿಗಳಿಗೆ ಒತ್ತಡ ಹೇರಿದ್ವ. ಆದರೆ ಇದಕ್ಕೆ ಒಪ್ಪದ ತಾಲಿಬಾನಿಗಳು ಶಾರಿಯಾ ಕಾನೂನು ನಡೆಸುವುದಾಗಿ ಹೇಳಿಕೊಂಡಿದೆ.

ಈ ಶರಿಯಾ ಕಾನೂನು ಮುಸ್ಲಿಂ ಧರ್ಮೀಯರ ಜೀವನ ಕ್ರಮವನ್ನು ತಿಳಿಸುತ್ತದೆ. ಪಾಶ್ಚಾತ್ಯ ಜೀವನ ಕ್ರಮದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ತನ್ನನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಈ ಕಾನೂನು ತಿಳಿಸುತ್ತದೆ. ಶರಿಯಾ ನಿಯಮಕ್ಕೆ ಅನುಗುಣವಾಗಿ ತನ್ನ ನಿತ್ಯದ ಜೀವನವನ್ನು ನಡೆಸಬೇಕು ಎಂಬುದು ಕಡ್ಡಾಯವಾಗಿದೆ.

ಶರಿಯಾ ಕಾನೂನು ಕ್ಲಿಷ್ಟಕರವಾಗಿದ್ದು ಕಾನೂನಿನ ಅಭ್ಯಾಸವು ಪರಿಣಿತರ ತರಬೇತಿಯನ್ನು ಆಧರಿಸಿದೆ. ಇಸ್ಲಾಂನ ನ್ಯಾಯಾಶಾಸ್ತ್ರಜ್ಞರು ತೀರ್ಪುಗಳನ್ನು ಹಾಗೂ ಮಾರ್ಗದರ್ಶನವನ್ನು ನೀಡುತ್ತಾರೆ. ಈ ರೀತಿಯ ಔಪಚಾರಿಕ ಕಾನೂನು ತೀರ್ಪಿನ ಮಾರ್ಗದರ್ಶನವನ್ನು ಫತ್ವಾ ಎಂದು ಕರೆಯಲಾಗುತ್ತದೆ. ಶರಿಯಾ ಕಾನೂನು ಬೋಧಿಸುವ ಐದು ಶಾಲೆಗಳಿವೆ ಹಾಗೂ ನಾಲ್ಕು ಸುನ್ನಿ ಸಿದ್ಧಾಂತಗಳಿವೆ. ಹನ್ಬಲಿ, ಮಾಲಿಕಿ, ಶಾಫಿ ಮತ್ತು ಹನಾಫಿ, ಮತ್ತು ಶಿಯಾ ಸಿದ್ಧಾಂತ, ಶಿಯಾ ಜಾಫರಿ ಎಂಬುದಾಗಿ ಇವುಗಳನ್ನು ಹೆಸರಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights