ಪ್ರಧಾನಿ ಮೋದಿಗೆ ದೇವಾಲಯ ಕಟ್ಟಿದ ಬಿಜೆಪಿ ಕಾರ್ಯಕರ್ತ; ಟೀಕೆಯ ಬಳಿಕೆ ಮೋದಿ ಪ್ರತಿಮೆ ತೆರವು!

ಪುಣೆ ನಗರದ ಔಂಧ್‌ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಾಗಿ ದೇವಾಲಯ ಕಟ್ಟಿ, ಅದರಲ್ಲಿ ಮೋದಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಬಿಜೆಪಿ ಕಾರ್ಯಕರ್ತ ತಾವು ನಿರ್ಮಿಸಿದ್ದ ಮೋದಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ ಎಂಬುವವರು ಪುಣೆಯ ಔಂದ್ ಪ್ರದೇಶದ ರಸ್ತೆಯ ಪಕ್ಕದಲ್ಲಿ ಸಣ್ಣ ದೇವಸ್ಥಾನವನ್ನು ನಿರ್ಮಿಸಿ, ಮೋದಿಯವರ ಪ್ರತಿಮೆಯನ್ನು ಸ್ಥಾಪಿಸಿದ್ದರು.

“ನಾನು ಪ್ರಧಾನಿ ನರೇಂದ್ರ ಮೋದಿಯವರ ಅನುಯಾಯಿ. ನಾನು ಅವರನ್ನು ಪೂಜಿಸಲು ಮತ್ತು ಆಶೀರ್ವಾದ ಪಡೆಯಲು ದೇವಸ್ಥಾನವನ್ನು ನಿರ್ಮಿಸಿದ್ದೆ. ಅದು ಇತರ ಅನುಯಾಯಿಗಳೂ ಆಶೀರ್ವಾದ ಪಡೆಯಲು ಸಹ ಸಹಾಯ ಮಾಡುತ್ತಿತ್ತು” ಎಂದು ಮಯೂರ್ ಹೇಳಿದ್ದಾರೆ.

ಮಯೂರ್ ಅವರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಬಿಜೆಪಿಯ ಸ್ಥಳೀಯ ಶಾಸಕ ಸಿದ್ದಾರ್ಥ್ ಶಿರೋಲೆ ಕೂಡ ತಮ್ಮ ಕಾರ್ಯಕರ್ತನ ಕೆಲಸಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪರ್ವತ ಹತ್ತುವ ಮೂಲಕ ನಟ ಸೋನು ಸೂದ್ ಗೆ ಗೌರವ ಸಲ್ಲಿಸಿದ ಉಮಾ ಸಿಂಗ್!

ಮೋದಿ ಪ್ರತಿಮೆ ತೆಗೆದುಹಾಕಿರುವುದು ನಮಗೆ ನಿರಾಶೆಯಾಗಿದೆ. ನಾವು ದೇವಸ್ಥಾನಕ್ಕೆ ಹೋಗಿ ಅಲ್ಲಿನ ವಿಗ್ರಹಕ್ಕೆ ಪೆಟ್ರೋಲ್, ಎಲ್‌ಪಿಜಿ ಹಾಗೂ ಆಹಾರ ಪದಾರ್ಥಗಳನ್ನು ನೀಡಲು ಬಯಸಿದ್ದೆವು. ಏಕೆಂದರೆ ಅವುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಅಗತ್ಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು, ಯುವಕರಿಗೆ ಉದ್ಯೋಗವನ್ನು ಒದಗಿಸಲು ನಾವು ದೇವಸ್ಥಾನದಲ್ಲಿ ಪ್ರಾರ್ಥಿಸಲು ನಿರ್ಧರಿಸಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆ ಅನ್ನು ತೆಗೆದುಹಾಕಲಾಗಿದೆ. ಇದು ನಮಗೆ ನಿರಾಶೆಯುಂಟು ಮಾಡಿದೆ” ಎಂದು ನಗರದ ಎನ್‌ಸಿಪಿ ಮುಖ್ಯಸ್ಥ ಪ್ರಶಾಂತ್ ಜಗತಾಪ್ ಹೇಳಿದ್ದಾರೆ.

ಪ್ರತಿಮೆ ನಿರ್ಮಾಣ ವಿವಾದ ಸ್ವರೂಪ ಪಡೆಯುತ್ತಲೇ ಪ್ರತಿಮೆಯನ್ನು ತೆಗೆದುಹಾಕಲಾಗಿದ್ದು, ಮಯೂರ್ ಮುಂಡೆ ಯಾರ ಕೈಗೂ ಸಿಗದೆ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಮ್ಮು – ಕಾಶ್ಮೀರ: ಅಪ್ನಿ ಪಕ್ಷದ ಮುಖಂಡ ಸೇರಿ 11 ದಿನಗಳಲ್ಲಿ 4 ರಾಜಕರಣಿಗಳ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights