ಹೃದಯಾಘಾತದಿಂದ ಖ್ಯಾತ ಮಲಯಾಳಂ ನಟಿ ಚಿತ್ರಾ ನಿಧನ..!

ಖ್ಯಾತ ಮಲಯಾಳಂ ನಟಿ ಚಿತ್ರಾ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಶನಿವಾರ ಬೆಳಗ್ಗೆ ಚೆನ್ನೈನ ಅವರ ನಿವಾಸದಲ್ಲಿ ನಟಿ ಚಿತ್ರಾ (56) ಹೃದಯಾಘಾತಕ್ಕೊಳಗಾಗಿ ನಿಧನರಾದರು. ತಮಿಳು ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಟಿ ಚಿತ್ರಾ ಬಹು ಭಾಷೆಯ ನಟಿ. ಇವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅತ್ಯಂತ ಜನಪ್ರಿಯಾ ಚಿತ್ರಗಳಾದ ಕಾಲಿಕ್ಕಲಂ (1990), ದೇವಾಸುರಂ (1993), ಮತ್ತು ಪಥಮುದಯಂ (1985) ಸಿನಿಮಾಗಳಲ್ಲಿ ನಟಿಸಿದ್ದಾರೆ.

1965 ರಲ್ಲಿ ಕೊಚ್ಚಿಯಲ್ಲಿ ಜನಿಸಿದ ಚಿತ್ರಾ 1983 ರಲ್ಲಿ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಚೊಚ್ಚಲ ಚಿತ್ರ ‘ಆಟಕಲಶಂ’. ಈ ಚಿತ್ರದಲ್ಲಿ ಪ್ರೇಮ್ ನಜೀರ್ ಮತ್ತು ಮೋಹನ್ ಲಾಲ್ ಜೊತೆಯಲ್ಲಿ ನಟಿಸಿದ್ದಾರೆ.

ಮನರಂಜನಾ ಉದ್ಯಮಕ್ಕೆ ಕಾಲಿಡುವ ಮೊದಲು ಆಕೆ ತನ್ನ ಶಿಕ್ಷಣವನ್ನು 10 ನೇ ತರಗತಿಯವರೆಗೆ ಮುಗಿಸಿದಳು. ಅವರು 1990 ರಲ್ಲಿ ವಿಜಯರಾಘವನನ್ನು ವಿವಾಹವಾದ ಅವರಿಗೆ ಓರ್ವ ಪುತ್ರಿ ಇದ್ದಾರೆ. ಸದ್ಯ ಚಿತ್ರಾ ತನ್ನ ಮಗಳು ಮಹಾಲಕ್ಷ್ಮಿಯನ್ನು ಅಗಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights