‘ಒಬ್ಬ ಹುಚ್ಚ ಪ್ರಚಾರದಲ್ಲಿ ಇರೋಕೆ ಏನು ಬೇಕಾದರೂ ಮಾಡುತ್ತಾನೆ’ ಯತ್ನಾಳ್ ವಿರುದ್ಧ ಡಿಕೆಶಿ ಗರಂ!
ರಾಹುಲ್ ಗಾಂಧಿ ಹುಚ್ಚ ಎಂದಿದ್ದ ಯತ್ನಾಳ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಒಬ್ಬ ಹುಚ್ಚ ಪ್ರಚಾರದಲ್ಲಿ ಇರೋಕೆ ಏನು ಬೇಕಾದರೂ ಮಾಡುತ್ತಾನೆ. ಅವನೊಬ್ಬ ಹುಚ್ಚ. ಕೋವಿಡ್ ವೈಫಲ್ಯ ಬೆಲೆ ಏರಿಕೆಯನ್ನೆಲ್ಲ ಡೈವರ್ಟ್ ಮಾಡೋಕೆ ಇಂತದೆಲ್ಲಾ ಮಾತನಾಡುತ್ತಾರೆ ಎಂದು ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,’ ಆಫ್ಘನ್ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಎಲ್ಲ ತರಹದ ರಕ್ಷಣೆ ಕೊಡಬೇಕಾಗುತ್ತದೆ ಎಂದಿದ್ದೇನೆ. ಅವರು ಮಾನಸಿಕವಾಗಿ ನೊಂದಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ ವಿದೇಶಿ ವಿದ್ಯಾರ್ಥಿಗಳು ಓದುತ್ತಾರೆ. ಮಕ್ಕಳು ಎಲ್ಲರೂ ನಮ್ಮ ಮಕ್ಕಳೇ. ಧರ್ಮ ಯಾವುದೇ ಆದರೂ ನಮ್ಮ ಮಕ್ಕಳು ಅವರು. ಇಂತಹ ಸಂದರ್ಭದಲ್ಲಿ ಮಾನವೀಯತೆ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ವಿನಯ್ ಕುಲಕರ್ಣಿ ಬಗ್ಗೆ ಮಾತನಾಡಿದ ಡಿಕೆಶಿ, ವಿನಯ್ ಕುಲಕರ್ಣಿ ಜೈಲಿನಲ್ಲಿರುವಾಗ ಾದ ನೋವು ಹೊರಗಡೆ ಆದ ನೋವನ್ನು ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯ ಸಿಗುತ್ತದೆ. ಅವರ ಕೇಸ್ ಯಾವ ಹಂತದಲ್ಲಿ ಇದೆ ಎಂದು ಗೊತ್ತಿದೆ. ಎಲೆಕ್ಷನ್ ಟೈಮ್ ನಲ್ಲಿ ಯಾವ ಲೀಡರ್ಸ್ ಬಂದು ಏನು ಮಾತನಾಡಿದ್ದಾರೆ, ಭಾಷಣ ಮಾಡಿದ್ದಾರೆ ಎಂದು ನೆನಪಿಸಿಕೊಳ್ಳಿ ಎಂದರು.