ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ಹಣ ದೋಚಿ ಪರಾರಿಯಾದ ಆರೋಪಿಗಳು!

ಬಳೆ ಮಾರಾಟ ಮಾಡುತ್ತಿದ್ದ ಬಳೆ ವ್ಯಾಪಾರಿಯೊಬ್ಬನನ್ನು ಕಿಡಿಗೇಡಿಗಳ ಗುಂಪೊಂದು  ಸಾರ್ವಜನಿಕರ ಎದುರೇ ಕ್ರೂರವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ನಡೆದಿದೆ. ಮಾತ್ರವಲ್ಲದೆ, ಹಲ್ಲೆಕೋರರು ವ್ಯಾಪಾರಿಯ ಬಳಿಯಿದ್ದ 10,000 ರೂಗಳನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೂರಾರು ಜನರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ನಂತರ ತಡರಾತ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ಹಲ್ಲೆಗೊಳಗಾದ 25 ವರ್ಷದ ಯುವಕ ತನ್ನ ವ್ಯಾಪಾರಕ್ಕಾಗಿ ಸುಳ್ಳು ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಜನರ ಅರಿವಿಗೆ ಬಂದದ್ದರಿಂದ ಅವರ ಮೇಲೆ ದಾಳಿ ನಡೆದಿದೆ” ಎಂದು ರಾಜ್ಯದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರು ಪೊಲೀಸ್‌ ತನಿಖೆಯನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ. ಘಟನೆಗೆ ಕೊಮು ಬಣ್ಣ ನೀಡಬಾರದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೇರಲಿದ್ದಾರೆ ಜಿಟಿ ದೇವೇಗೌಡ ಮತ್ತು ಅವರ ಪುತ್ರ ಹರೀಶ್‌!

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂತ್ರಸ್ತ ಯುವಕನನ್ನು ತಸ್ಲೀಮ್ ಎಂದು ಗುರುತಿಸಲಾಗಿದೆ. ಇಂದೋರ್‌ನ ಬಂಗಾಂಗಾ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ದುಷ್ಕರ್ಮಿಗಳ ಗುಂಪು ಥಳಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ದುಷ್ಕರ್ಮಿಗಳು ಯುವಕನನ್ನು ಸುತ್ತುವರೆದು ಥಳಿಸುತ್ತಿರುವಾಗ ಕೋಮು ನಿಂದನೆ ಭಾಷೆಯನ್ನು ಬಳಸಿರುವುದು ಕಂಡು ಬಂದಿದೆ.

“ನಿಮಗೆ ಬೇಕಾದುದನ್ನು ತೆಗೆದುಕೊಳ್ಳಿ. ಅವನು ಇನ್ನು ಮುಂದೆ ಈ ಪ್ರದೇಶದಲ್ಲಿ ಕಾಣಬಾರದು” ಎಂದು ಒಬ್ಬ ವ್ಯಕ್ತಿ ಬ್ಯಾಗಿನಿಂದ ಬಳೆಗಳನ್ನು ತೆಗೆಯುತ್ತಾ ಹೇಳುತ್ತಾನೆ. ಅದೇ ವ್ಯಕ್ತಿ ಸಾರ್ವಜನಿಕರನ್ನು ಮುಂದೆ ಬಂದು ಯುವಕನನ್ನು ಥಳಿಸುವಂತೆ ಕೇಳುತ್ತಾನೆ. ಇದರ ನಂತರ, ಮೂರರಿಂದ ನಾಲ್ಕು ಜನರು ಯುವಕನಿಗೆ ನಿರ್ದಯವಾಗಿ ಥಳಿಸಿದ್ದಾರೆ.

ಇದನ್ನೂ ಓದಿ: ಲಸಿಕಾ ಪ್ರಮಾಣಪತ್ರದಲ್ಲಿ ಮೋದಿ ಫೋಟೋ; ವಿದೇಶಿ ಪ್ರಯಾಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಭಾರತೀಯರು!

“ಅವರು ಮೊದಲು ನನ್ನ ಹೆಸರನ್ನು ಕೇಳಿದರು. ನಾನು ನನ್ನ ಹೆಸರನ್ನು ಹೇಳಿದ ನಂತರ ಹೊಡೆಯಲಾರಂಭಿಸಿದರು. ನನ್ನ ಬಳಿಯಿದ್ದ 10,000 ರೂ. ದೋಚಿದ್ದಲ್ಲದೆ, ನನ್ನ ಬಳಿಯಿದ್ದ ಬಳೆಗಳು ಮತ್ತು ಇತರ ವಸ್ತುಗಳನ್ನು ನಾಶ ಮಾಡಿದರು” ಎಂದು ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.

“ನಾವು ದೂರುದಾರರ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ಮಾಡುತ್ತಿದ್ದೇವೆ. ಆದರೆ ಸಾಮಾಜಿಕ ಜಾಲತಾಣದ ಕೋಮು ಪ್ರಚೋದಕ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಜನರೊಂದಿಗೆ ನಾವು ಕೇಳುತ್ತಿದ್ದವೆ. ಸಾಮಾಜಿಕ ಜಾಲತಾಣದ ಅಂತಹ ಪೋಸ್ಟ್‌ಗಳ ಮೇಲೆ ನಾವು ನಿಗಾ ಇಟ್ಟಿದ್ದೇವೆ. ವಿಡಿಯೋದಲ್ಲಿನ ಆರೋಪಿಗಳನ್ನು ಗುರುತಿಸಲಾಗುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಇಂದೋರ್ ಪೂರ್ವ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ಬಾಗ್ರಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದಾಗಿಯು ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, “ಈ ವಿಡಿಯೋ ಅಫ್ಘಾನಿಸ್ತಾನದ್ದಲ್ಲ, ಬದಲಾಗಿ ಭಾರತದ ಮಧ್ಯಪ್ರದೇಶದ ಇಂದೋರ್‌ನದ್ದು. ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸುತ್ತಾರೆ, ಅವರಿಂದ ಬಳೆಗಳನ್ನು ಲೂಟಿ ಮಾಡುತ್ತಾರೆ. ಯುವಕ ಮಾಡಿದ ಏಕೈಕ ತಪ್ಪೆಂದರೆ ಆತ ಹಿಂದು ಪ್ರದೇಶದಲ್ಲಿ ಬಳೆಗಳನ್ನು ಮಾರಾಟ ಮಾಡಲು ತೆರಳಿದ್ದು” ಎಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/Bhabanisankar02/status/1429662493857644544

ಇದನ್ನೂ ಓದಿ: ಲಸಿಕೆ ಪಡೆಯದಿದ್ದರೆ ಪಡಿತರ ರದ್ದು; ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ತಹಶೀಲ್ದಾರ್‌, ಜಿಲ್ಲಾಧಿಕಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights