ಪತ್ನಿಯ ಇಚ್ಛೆಗೆ ವಿರುದ್ದವಾಗಿ ನಡೆಯುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಛತ್ತೀಸ್‌ಘಡ ಹೈಕೋರ್ಟ್‌

ತನ್ನ ಪತ್ನಿಯೊಂದಿಗೆ ಪುರುಷನು ಬಲವಂತವಾಗಿ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಸಿದರೂ ಕೂಡಾ ಅದನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಚತ್ತೀಸ್‌ಘಡ ಹೈಕೋರ್ಟ್ ಹೇಳಿದೆ.

ಮಹಿಳೆಯೊಬ್ಬರು ತನ್ನ ಇಚ್ಚೆಗೆ ವಿರುದ್ದವಾಗಿ ಬಲವಂತದಿಂದ ಅಸಹಜನ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅತ್ಯಾಚಾರದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದರು.

ಮಹಿಳೆ ದಾಖಲಿಸಿದ್ದ ದೂರಿನ ವಿರುದ್ದ ಆಕೆಯ ಪತಿ ಮತ್ತು ಆತನ ಕುಟುಂಬಸ್ಥರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ  ನಡೆಸಿರುವ ಕೋರ್ಟ್‌, ಆತನನ್ನು ಆರೋಪಗಳಿಂದ ದೋಷಮುಕ್ತಗೊಳಿಸಿದೆ.

ಛತ್ತೀಸ್‌ಘಡ ಹೈಕೋರ್ಟ್‌ ನ್ಯಾಯಮೂರ್ತಿ ಎನ್.ಕೆ.ಚಂದ್ರವಂಶಿ ಅವರು ಭಾರತೀಯ ದಂಡಸಂಹಿತೆಯ ಸೆಕ್ಷನ್ 375ರ ಪ್ರಕಾರ ಪತಿ ಹಾಗೂ ಆತನ ಪತ್ನಿಯ ನಡುವೆ ನಡೆಯುವ ಲೈಂಗಿಕ ಕ್ರಿಯೆಯು ಅತ್ಯಾಚಾರವೆನಿಸದು. ಪತಿಯು ಪತ್ನಿಯೊಂದಿಗೆ ಬಲವಂತದಿಂದ ಲೈಂಗಿಕ ಸಂಪರ್ಕ ಹೊಂದಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಈ ಪ್ರಕರಣದಲ್ಲಿ ಅರ್ಜಿದಾರ ವ್ಯಕ್ತಿಯು ಕಾನೂನುಸಮ್ಮತವಾಗಿ ಮಹಿಳೆಯನ್ನು ವಿವಾಹವಾಗಿದ್ದಾನೆ. ಹೀಗಾಗಿ ಆಕೆಯೊಂದಿಗೆ ಪತಿಯು ಲೈಂಗಿಕ ಸಂಭೋಗ ಅಥವಾ ಇನ್ನಾವುದೇ ಲೈಂಗಿಕ ಕ್ರಿಯೆಯನ್ನು ಬಲವಂತದಿಂದ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಸಿದರೂ ಅದು ಅತ್ಯಾಚಾರವಾಗುವುದಿಲ್ಲ” ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

ಮಹಿಳೆಯು ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ 498 ಎ ಸೆಕ್ಷನ್ (ಮಹಿಳೆಯರ ಮೇಲೆ ಕ್ರೌರ್ಯ) ಹಾಗೂ 377 ಸೆಕ್ಷನ್ (ಅಸಹಜ ಅಪರಾಧಗಳು, ಪ್ರಕೃತಿ ವಿರುದ್ಧವಾದ ಗುದಸಂಭೋಗ) ಅನ್ವಯ ದೂರು ದಾಖಲಿಸಿದ್ದರು.

ಅಲ್ಲದೆ, ವಿವಾಹದ ಬಳಿಕ ಪತಿ ಹಾಗೂ ಆತನ ಕುಟುಂಬದ ಸದಸ್ಯರು ತನ್ನೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆಂದು ಮಹಿಳೆ ಆರೋಪಿಸಿದ್ದರು. ತನ್ನ ವಿರೋಧದ ಹೊರತಾಗಿಯೂ ಪತಿಯು ತನ್ನೊಂದಿಗೆ ಅಸಹಜವಾದ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿದ್ದನೆಂದು ಮಹಿಳೆ ಆರೋಪಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ 2 ವರ್ಷದಲ್ಲಿ 1168 ಅತ್ಯಾಚಾರ ಪ್ರಕರಣಗಳು ದಾಖಲು; ದಿನಕ್ಕೆ ಕನಿಷ್ಟ ಒಂದು ಅತ್ಯಾಚಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights