ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರ ಬ್ಯಾನರ್: ಅಲಹಾಬಾದ್ ಹೈಕೋರ್ಟ್ ಆಕ್ರೋಶ

ಲಕ್ನೌನಲ್ಲಿ, ಸಿ ಎ ಎ ವಿರೋಧಿ ಪ್ರತಿಭಟನಕಾರರು ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ಅವರ ಫೋಟೋಗಳನ್ನು ಒಳಗೊಂಡಿರುವ ಬ್ಯಾನರ್ ಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾಕಿರುವುದರ ಬಗ್ಗೆ ಭಾನುವಾರ ವಿಶೇಷ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್ ರಾಜ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥೂರ್ ಮತ್ತು ನ್ಯಾಯಮೂರ್ತಿ ರಮೇಶ್ ಸಿನ್ಹ ಒಳಗೊಂಡ ಪೀಠ, ಈ ರೀತಿ ಸಿ ಎ ಎ ವಿರೋಧಿ ಪ್ರತಿಭಟನಕಾರರ ಫೋಟೋ ಒಳಗೊಂಡ ಬ್ಯಾನರ್ ಹಾಕಿರುವ ರಾಜ್ಯಸರ್ಕಾರದ ನಿರ್ಧಾರ “ನ್ಯಾಯಯುತವಾದದ್ದಲ್ಲ” ಎಂದು ತಿಳಿಸಿದ್ದು, ಇದು ಆ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರದ ಮೇಲೆ ನಡೆದ ಆಕ್ರಮಣ ಎಂದಿದೆ.

ಡಿಸೆಂಬರ್ 19, 2019 ರಂದು ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಹಲವು ವ್ಯಕ್ತಿಗಳಿಗೆ ನೋಟಿಸ್ ಕೊಟ್ಟಿರುವ ಲಕನೌ ಆಡಳಿತ, ಅಂತಹ ಸುಮಾರು 60 ವ್ಯಕ್ತಿಗಳ ಫೋಟೊ ಇರುವ ಬ್ಯಾನರ್ ಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಈ ಬ್ಯಾನರ್ ಗಳನ್ನು ಹಾಕಲಾಗಿದೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದರು. ಸಮಾಜಿಕ ಕಾರ್ಯಕರ್ತ ಸದಫ್ ಜಫರ್, ಮಾನವ ಹಕ್ಕುಗಳ ಕಾರ್ಯಕರ್ತ ಮೊಹಮದ್ ಶೋಯೆಬ್ ಮತ್ತು ಮಾಜಿ ಐಪಿಸ್ ಅಧಿಕಾರಿ ಎಸ್ ಆರ್ ದಾರಾಪುರಿ ಅವರುಗಳ ಫೋಟೋಗಳನ್ನು ಕೂಡ ಈ ಬ್ಯಾನರ್ ನಲ್ಲಿ ಸೇರಿಸಲಾಗಿದೆ.

ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆಯನ್ನು ಭಾನುವಾರ 10 ಘಂಟೆಗೆ ನಡೆಸಿದ ಅಲಹಬಾದ್ ಹೈಕೋರ್ಟ್ ಪೀಠ ಮೌಖಿಕ ಆದೇಶ ನೀಡಿ “ರಾಜ್ಯಸರ್ಕಾರ ಈ ಬ್ಯಾನರ್ ಗಳನ್ನು ಕೂಡಲೆ ತೆರವುಗೊಳಿಸಿ ಕೋರ್ಟ್ ಗೆ ತಿಳಿಸುವಂತೆ” ಹೇಳಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights