8 ಕೆಜಿ ಲೆಹೆಂಗಾದೊಂದಿಗೆ ಪುಷ್ ಅಪ್ ಮಾಡಿದ ವಧು – ಪೈಪೋಟಿಗಿಳಿದ ವರ!

ಮದುವೆ ವೇದಿಕೆ ಮೇಲೆ ವಧುವರರಿಬ್ಬರೂ ಪುಷ್ ಅಪ್ ಪೈಪೋಟಿಗಿಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 8 ಕೆಜಿ ಲೆಹೆಂಗಾದೊಂದಿಗೆ ವಧು ವರರಿಗೆ ಕಾಂಪಿಟೇಷನ್ ನೀಡಿದ್ದಾಳೆ.

ಮದುವೆಯ ವೀಡಿಯೊಗಳು ಜೀವನದ ಒಂದು ಪ್ರಮುಖ ದಿನದ ಅಮೂಲ್ಯ ನೆನಪುಗಳನ್ನು ಸೆರೆಹಿಡಿಯುತ್ತವೆ. ಅವುಗಳಲ್ಲಿ ಹಲವು ಸಿಹಿಯಾಗಿ ಮತ್ತು ಮುದ್ದಾಗಿರುತ್ತವೆ. ಇನ್ನೂ ಕೆಲವು ನಿಮ್ಮನ್ನು ನಗಿಸುತ್ತವೆ. ನೆಟ್ಟಿಗರನ್ನು ಅಚ್ಚರಿಗೊಳಿಸಿದ ಒಂದು ವಿಡಿಯೋ ಕೂಡ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಧುವರರು ತಮ್ಮ ಮದುವೆಯ ಸ್ಥಳದಲ್ಲಿ ಒಟ್ಟಿಗೆ ಪುಷ್-ಅಪ್ ಮಾಡಿದ್ದಿದೆ.

ವಿಡಿಯೋದಲ್ಲಿ ವಧು ಅಕ್ಷಿತಾ ಅರೋರಾ ಮಹಾಜನ್ ಮತ್ತು ವರ ಆದಿತ್ಯ ಮಹಾಜನ್ ಫಿಟ್ನೆಸ್ ತರಬೇತುದಾರರಾಗಿದ್ದಾರೆ. ಅಕ್ಷಿತಾ ಮತ್ತು ಆದಿತ್ಯ ಇಬ್ಬರೂ ವೇದಿಕೆಯಲ್ಲಿ ತಮ್ಮ ಮದುವೆಯ ಉಡುಗೆಯಲ್ಲಿ ಪುಷ್-ಅಪ್‌ಗಳನ್ನು ಮಾಡುವುದನ್ನು ಕಾಣಬಹುದು. ಅಕ್ಷತಾ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ವೈರಲ್ ವಿಡಿಯೋವನ್ನು ಇಲ್ಲಿ ನೋಡಿ:

https://www.youtube.com/watch?v=ba1EWeANWwI

ವೈರಲ್ ಆಗಿರುವ ಬಚ್‌ಪನ್ ಕಾ ಪ್ಯಾರ್ ಹಾಡಿಗೆ ಅಕ್ಷಿತಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ 29,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights