ಫ್ಯಾಕ್ಟ್‌ಚೆಕ್: ಕೆಫೆಯಲ್ಲಿ “ಲವ್ ಜಿಹಾದ್” ಎಂದು ದಾಳಿ ನಡೆಸಿ, ವಿಡಿಯೊ ಹಂಚಿಕೊಂಡ ಪೊಲೀಸರು! ಆದರೆ ಅಲ್ಲಿ ನಡೆದಿದ್ದೇನು?

ಕೆಫೆಯೊಂದರಲ್ಲಿ ಮೋಜು ಮಸ್ತಿಯಲ್ಲಿ (ಅಕ್ರಮ ಚಟುವಟಿಕೆಗಳಲ್ಲಿ) ತೊಡಗಿದ್ದ ಯುವಕ ಯುವತಿಯರ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಧ್ಯಪ್ರದೇಶದ ಹುಕ್ಕಾ ಬಾರ್‌ನಲ್ಲಿ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರಿಗೆ ಆಮಿಷ ಒಡ್ಡುತ್ತಿದ್ದಾರೆ (ಲವ್ ಜಿಹಾದ್) ಎಂಬ ಕೋಮುವಾದಿ ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೊದೊಂದಿಗೆ ಶೀರ್ಷಿಕೆ ಹೀಗಿದ್ದು, “ನಿನ್ನೆ ದಾಳಿ ನಡೆಸಿದ ಮಧ್ಯಪ್ರದೇಶದ ಹುಕ್ಕಾ ಬಾರ್‌ನಲ್ಲಿ 15  ಮುಸ್ಲಿಂ ಹುಡುಗರು ಮತ್ತು 15 ಹಿಂದೂ ಹುಡುಗಿಯರನ್ನು ಬಂಧಿಸಲಾಗಿದೆ. ಎಲ್ಲಾ ಹುಡುಗಿಯರು ಉತ್ತಮ ಹಣಕಾಸಿನ ಹಿನ್ನೆಲೆಯ ಕುಟುಂಬದಿಂದ ಬಂದವರು. ಆದರೆ ಮುಸ್ಲಿಮರು ಇಲ್ಲಿ “ಲವ್ ಜಿಹಾದ್” ನಡೆಸುತ್ತಿದ್ದಾರೆ ಎಂದು ಬಲಪಂಥೀಯ ಪ್ರತಿಪಾದಕರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಆಗಸ್ಟ್ 12, 2022 ರಂದು ಪ್ರಕಟವಾದ UP Tak ಲೇಖನ ಲಭ್ಯವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಘಟನೆಯು ನಡೆದಿರುವುದು ಮಧ್ಯಪ್ರದೇಶದಲ್ಲಿ ಅಲ್ಲ, ಬದಲಿಗೆ ಉತ್ತರ ಪ್ರದೇಶದ ಅಗ್ರಾದಲ್ಲಿ ಎನ್ನಲಾಗಿದೆ. ಕೆಫೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆದಿಲ್ಲ ಮತ್ತು ಅಲ್ಲಿ ಇದ್ದ ಎಲ್ಲರೂ ಹಿಂದೂ ಧರ್ಮದವರಾಗಿದ್ದು ಎಲ್ಲರೂ ಹಿಂದೂ ದಂಪತಿಗಳು ಎಂದು ವರದಿಯಾಗಿದೆ.

Screenshot From UP Tak Article

“ವೈರಲ್ ಆದ ವಿಡಿಯೋ ಬಿಕಾನೇರ್‌ಗೆ ಸಂಬಂಧಿಸಿಲ್ಲ, ತಪ್ಪು ಪ್ರಚಾರ ಮಾಡಬೇಡಿ, ಇದು ಕಾನೂನು ಪ್ರಕಾರ ಅಪರಾಧ ಆಗುತ್ತದೆ. ಇಂತಹ ದಾರಿತಪ್ಪಿಸುವ ವಿಡಿಯೋ ಅಥವಾ ಸುದ್ದಿಗಳನ್ನು ವೈರಲ್ ಮಾಡುವವರ ಬಗ್ಗೆ ತಕ್ಷಣ ಪೊಲೀಸರು ಕ್ರಮ ತೆಗೆದುಕೊಳ್ಳಬೆಕಾಗುತ್ತದೆ ಎಂದು ಟ್ವೀಟ್ ಮಾಡಿದೆ.

ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ಘಟನೆಯನ್ನು ಪರಿಶೀಲಿಸಿ ಫ್ಯಾಕ್ಟ್‌ಚೆಕ್ ವರದಿ ಮಾಡಿದ್ದು, ಪೊಲೀಸರ ದಾಳಿಯ ವೇಳೆ ಸಿಕ್ಕಿ ಬಿದ್ದ ಯುವಕ ಯುವತಿಯರೆಲ್ಲರೂ ಹಿಂದೂಗಳಾಗಿದ್ದು ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟವಾಗಿದೆ.

ಇಂಡಿಯಾ ಟುಡೆಯ ಆಗ್ರಾ ವರದಿಗಾರರ ಮೂಲಕ ವೈರಲ್ ಸುದ್ದಿಯ ಕುರಿತು ಪರಿಶೀಲಿಸಿದಾಗ, ಘಟನೆಯು ಆಗ್ರಾದಲ್ಲಿ ನಡೆದಿದೆ ಎಂದು ದೃಢಪಡಿಸಿದ್ದಾರೆ. ಆಗ್ರಾದ ಹರಿ ಪರ್ವತದ ಸಹಾಯಕ ಪೊಲೀಸ್ ಅಧೀಕ್ಷಕ ಸತ್ಯನಾರಾಯಣ ಪರಪತ್ ಅವರನ್ನು ಸಂಪರ್ಕಿಸಿ  “ಲವ್ ಜಿಹಾದ್” ಆರೋಪಗಳ ಬಗ್ಗೆ ವಿಚಾರಿಸಿದಾಗ, ಪರಪತ್ ಅದನ್ನು ನಿರಾಕರಿದ್ದಾರೆ, ಘಟನಾ ಸ್ಥಳದಲ್ಲಿ ಇದ್ದವರೆಲ್ಲ ಹಿಂದೂ ದಂಪತಿಗಳು ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೆಫೆಯಲ್ಲಿ ಇದ್ದ ದಂಪತಿಗಳ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಆದರೆ  ಅವರ ಅನುಮತಿ ಇಲ್ಲದೆ ಘಟನೆಯ ವಿಡಿಯೋವನ್ನು ಚಿತ್ರೀಕರಿಸಿರುವ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ವೀಡಿಯೋ ವೈರಲ್ ಆದ ನಂತರ ನಗರದಲ್ಲಿ ಸಂಚಲನ ಉಂಟಾಗಿತ್ತು ಮತ್ತು ಪೊಲೀಸರ ಅನುಚಿತ ವರ್ತನೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಇದೇ ಘಟನೆಯನ್ನು ಬೂಮ್‌ ಲೈವ್ ವರದಿ ಮಾಡಿದ್ದು,  ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಅವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ” ಎಂದು ಹೇಳಿದ್ದಾರೆ, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದು ಆಗ್ರಾದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ಚೌಧರಿ ಅವರು ಆಕ್ಷೇಪಾರ್ಹ ವಿಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ ಹರಿ ಪರ್ವತ ಠಾಣೆಯ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಎಂದು ಬೂಮ್‌ಲೈವ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಘಟನೆಯು ಜುಲೈ 27, 2022 ರಂದು ಉತ್ತರ ಪ್ರದೇಶದ ಆಗ್ರಾದ ಸಂಜಯ್ ಪ್ಲೇಸ್‌ನಲ್ಲಿರುವ ಕೆಫೆಯೊಂದರಲ್ಲಿ ನಡೆದಿದ್ದು, ಪೊಲೀಸರ ದಾಳಿಯ ವೇಳೆ, ಅಕ್ರಮ ಚಟುವಟಿಕೆ ನಡೆಯುತ್ತಿತ್ತು ಎಂಬುದು ಸುಳ್ಳು ಮತ್ತು ಕಫೆಯಲ್ಲಿ ಇದ್ದವರೆಲ್ಲರೂ ದಂಪತಿಗಳಾಗಿದ್ದು ಎಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಕೆಲ ಬಲಪಂಥಿಯ ಪ್ರತಿಪಾದಕರು ಘಟನೆಗೆ ಕೋಮು ಬಣ್ಣ ಹಚ್ಚಿ ‘ಲವ್ ಜಿಹಾದ್’ ಎಂದು ಸುಳ್ಳು ನಿರೂಪಣೆಯೊಂದಿಗೆ ವೈರಲ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಖ್ಯಾತ ಪತ್ರಕರ್ತ ರವೀಶ್ ಕುಮಾರ್ NDTVಗೆ ರಾಜೀನಾಮೆ ನೀಡಿದ್ದಾರೆಯೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights