ಕೇರಳದಲ್ಲಿ ಕೊರೊನಾಘಾತ : ಕಳೆದ 24 ಗಂಟೆಗಳಲ್ಲಿ 31,265 ಕೇಸ್ – ನಾಳೆಯಿಂದ ನೈಟ್ ಕರ್ಫ್ಯೂ!
ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ 31,265 ಹೊಸ ಕೇಸ್ ದಾಖಲಾಗಿವೆ. 153 ಜನ ಕೇರಳದಲ್ಲಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಇದರಿಂದಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಆಗಸ್ಟ್ 30 ರಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.
ಶನಿವಾರ ವರ್ಚುಯಲ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯ್ ವಿಜಯನ್,’ಲಾಕ್ ಡೌನ್ ಸಡಿಲಿಕೆಯಾದ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಇದು ವಿಪರೀತವಾಗಿದೆ. ಆದಾಗ್ಯೂ, ಕೋವಿಡ್-19 ಲಸಿಕಾ ಅಭಿಯಾನ ಸೇರಿದಂತೆ ಚಿಕಿತ್ಸಾ ಸೌಕರ್ಯವನ್ನು ಸರ್ಕಾರ ಹೆಚ್ಚಿಸಲಾಗಿದೆ. ಮುಂದಿನ ಆದೇಶದವರೆಗೂ ನಾಳೆಯಿಂದ ಲಾಕ್ ಡೌನ್ ಮುಂದುವರೆಯಲಿದೆ’ ಎಂದು ಅವರು ಹೇಳಿದರು.
ಕೊರೊನಾ ಹೆಚ್ಚಾಗುತ್ತಿರುವ ಕೇರಳದಲ್ಲಿ ಲಸಿಕೆ ನೀಡುವ ಕಾರ್ಯ ಕೂಡ ಚುರುಕುನಿಂದ ಸಾಗಿದೆ. ಒಂದು ದಿನದಲ್ಲಿ 5 ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿದೆ. ಆದರೂ ವೈರಸ್ ಸೋಂಕಿಗೆ ಒಳಗಾಗದ ಜನರ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದು ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 31,265 ಹೊಸ ಪ್ರಕರಣಗಳು, 21,468 ಚೇತರಿಕೆ ಹಾಗೂ 153 ಸಾವಿನ ಪ್ರಕರಣಗಳು ದಾಖಲಾಗಿದೆ.