ಸೇನಾ ಸಮವಸ್ತ್ರದಲ್ಲಿ ರಾಷ್ಟ್ರಗೀತೆ ಹಾಡಿ ಪ್ರಶಂಸೆ ಪಡೆದ 5ರ ಪುಟ್ಟ ಪೋರಿ!

ಮಿಜೋರಾಂನ ಐದು ವರ್ಷದ ಬಾಲಕಿ ಸೇನಾ ಸಮವಸ್ತ್ರದಲ್ಲಿ ರಾಷ್ಟ್ರಗೀತೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಶಂಸೆಗಳ ಸುರಿಮಳೆ ಸುರಿದಿದೆ. ಎಸ್ತರ್ ಹನಾಮ್ಟೆ ಎಂಬ ಹೆಸರಿನ ಪುಟ್ಟ ಪೋರಿ ರಾಷ್ಟ್ರಗೀತೆ ಹಾಡುವ ಮೂಲಕ ಮಿಜೋರಾಂ ಮುಖ್ಯಮಂತ್ರಿ ಜೊರಮ್‌ಥಾಂಗಾ ಮತ್ತು ಲಕ್ಷಾಂತರ ಜನರ ಗಮನ ಸೆಳೆದಿದ್ದಾಳೆ.

ಬಾಲಕಿ ಎಸ್ತರ್ ತನ್ನ ಸ್ವಗ್ರಾಮವಾದ ಮಿಜೋರಾಂನ ಲುಂಗ್ಲೆಯ್‌ನಲ್ಲಿ ಸೈನ್ಯದ ಸಮವಸ್ತ್ರ ಧರಿಸಿ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಾ ಸೈನಿಕರ ಜೊತೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿರುವ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು 2 ನಿಮಿಷದ ವಿಡಿಯೋವನ್ನು ಜೊರಾಮ್‌ಥಾಂಗ ಮತ್ತು ಇತರ ಹಲವಾರು ಜನರು ಹಂಚಿಕೊಂಡಿದ್ದಾರೆ. ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನಗಳ ಮೊದಲು ಆಗಸ್ಟ್ 13 ರಂದು ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಏರ್ ಮಾರ್ಷಲ್ ಅನಿಲ್ ಚೋಪ್ರಾ (ನಿವೃತ್ತ) ವಿಡಿಯೋವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

https://twitter.com/ZoramthangaCM/status/1426845051397689348?ref_src=twsrc%5Etfw%7Ctwcamp%5Etweetembed%7Ctwterm%5E1426845051397689348%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fwatch-5-year-old-mizoram-girl-esther-hnamte-sings-national-anthem-in-army-uniform-with-soldiers-2522547

ಎಸ್ತರ್ ಅವರ ವೀಡಿಯೋದಲ್ಲಿ ಈಶಾನ್ಯ ರಾಜ್ಯದ ಹಲವಾರು ಆಕರ್ಷಕ ಚಿತ್ರಗಳು ಮತ್ತು ಸ್ಥಳೀಯ ಸಂಗೀತಗಾರರು ಹಿನ್ನೆಲೆಯಲ್ಲಿ ವಿವಿಧ ಸಂಗೀತ ವಾದ್ಯಗಳನ್ನು ನುಡಿಸುತ್ತಿರುವುದನ್ನು ಕಾಣಬಹುದು.

ಮಾತ್ರವಲ್ಲದೇ ಎಸ್ತರ್ ಕಳೆದ ವರ್ಷ ರಾಷ್ಟ್ರೀಯ ಹಾಡು “ವಂದೇ ಮಾತರಂ” ಹಾಡಿದಾಗ ವೈರಲ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಮಗುವನ್ನು ಟ್ವಿಟರ್‌ನಲ್ಲಿ ಹೊಗಳಿದ್ದರು.

ಎಸ್ತರ್ 5 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿದ್ದು, ಅಲ್ಲಿ ವಿವಿಧ ಹಾಡುಗಳ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights