21 ಗುಂಟೆ ಜಮೀನಿಗಾಗಿ ನಾಲ್ವರು ಸಹೋದರರ ಬರ್ಬರ ಹತ್ಯೆ; 9 ಆರೋಪಿಗಳ ಬಂಧನ

ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ನಡೆದಿದ್ದು, ಜಗಳದ ವೇಳೆ ನಾಲ್ವರು ಸಹೋದರರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದಲ್ಲಿ ನಡೆದಿದೆ. ಪ್ರರಕಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ.

ಗ್ರಾಮದ ಹೊರವಲಯದಲ್ಲಿರುವ ಸುಮಾರು 3 ಎಕರೆ 21 ಗುಂಟೆ ಜಮೀನಿನ ಪೈಕಿ 21 ಗುಂಟೆ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ವಿವಾದವೆದ್ದಿತ್ತು. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ತೋಟದಲ್ಲಿ ಜಗಳ ನಡೆದಿದ್ದು, ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮುದರಡ್ಡಿ ಕುಟುಂಬದವರು ಗ್ರಾಮದ ಪುಟಾಣಿ ಕುಟುಂಬದವರಿಂದ ಜಮೀನು ಖರೀದಿ ಮಾಡಿದ್ದು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಿವಾದವೆದ್ದಿತ್ತು. ಜಗಳದಲ್ಲಿ ಮುದರಡ್ಡಿ ಕುಟುಂಬದ ಹನುಮಂತ ಮಹಾದೇವ ಮುದರಡ್ಡಿ, ಮಲ್ಲಪ್ಪ, ಬಸಪ್ಪ ಹಾಗೂ ಈಶ್ವರ ಎಂಬ ಸಹೋದರರನ್ನು ಕೊಲೆಮಾಡಲಾಗಿದೆ.

Read Also: ಕೇವಲ 1 ರೂಗೆ ಊಟ; ಬಡ ಜನರ ಹೊಟ್ಟೆ ತುಂಬಿಸುತ್ತಿದೆ ಯುವಕರ ತಂಡ!

ಪುಟಾಣಿ ಕುಟುಂಬದವರಿಂದ ಖರೀದಿಸಿದ್ದ 3ಎಕರೆ 21 ಗುಂಟೆ ಜಮೀನಿನಲ್ಲಿ 21 ಗುಂಟೆ ಜಾಗವನ್ನು ಬಿಟ್ಟು ಕೊಡುವುದಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುದರಡ್ಡಿ ಕುಟುಂಬದವರು ಒಪ್ಪಿಕೊಂಡಿದ್ದರು. ಆದರೆ, ಅವರು ಜಮೀನು ಬಿಟ್ಟು ಕೊಡದೆ ಸತಾಯಿಸಿದ್ದರು. ಇದರಿಂದ ಸಿಟ್ಟಾಗಿದ್ದ ಪುಟಾಣಿ ಕುಟುಂಬದವರು ದುಷ್ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪುಟಾಣಿ ಮನೆತನದ ನಂದೀಶ್, ನಾಗಪ್ಪ, ಪರಪ್ಪ, ಶಿವಾನಂದ, ಈರಪ್ಪ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರೀ, ಸುನಂದಾ ಹಾಗೂ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಸೇರಿದಂತೆ ಒಟ್ಟು 12 ಮಂದಿ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಜಮಖಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಧಾರವಾಡ ಹೈಕೋರ್ಟ್‌ನಲ್ಲಿ ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ ವಿಚಾರಣೆ ನಡೆಯುತ್ತಿತ್ತು. ಆದರೆ, ವಿಚಾರಣೆ ಇನ್ನೂ ಅಂತ್ಯಗೊಂಡಿರಲಿಲ್ಲ. ಹೀಗಾಗಿ ವಿವಾದವೂ ಬಗೆಹರಿದಿರಲಿಲ್ಲ. ಎರಡು ಕುಟುಂಬದ ನಡುವೆ ದ್ವೇಷ ಮುಂದುವರೆದಿತ್ತು. ಹೀಗಾಗಿ ಪುಟಾಣಿ ಮನೆತನದವರು ತೋಟಕ್ಕೆ ಬಂದ ಮುದರಟ್ಟಿ ಕುಟುಂಬದ ಸಹೋದರರನ್ನು ಕೊಚ್ಚಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Read Also: ಕೇರಳ ಕಾಂಗ್ರೆಸ್‌ನಲ್ಲೂ ಭಿನ್ನಮತ; ಇಬ್ಬರು ನಾಯಕರ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights