ದೇಶದಲ್ಲಿ ಕೊರೊನಾ ಏರಿಳಿಕೆ : 30,941 ಹೊಸ ಕೇಸ್ ಪತ್ತೆ – 350 ಜನ ಬಲಿ!

ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಳಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 30,941 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, 350  ಜನ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 30,941 ಹೊಸ ಕೊರೊನಾ ಪ್ರಕರಣಗಳೊಂದಿಗೆ ದೇಶದಲ್ಲಿನ ಒಟ್ಟು ಕೊರೊನಾ ಸೋಂಕಿತ ಸಂಖ್ಯೆ 3,27,68,880 ಕ್ಕೆ ಏರಿಕೆಯಾಗಿದೆ. 350 ಹೊಸ ಸಾವಿನೊಂದಿಗೆ ಸಾವಿನ ಸಂಖ್ಯೆ 4,38,560ಕ್ಕೇರಿಕೆಯಾಗಿದೆ. 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,684 ರಷ್ಟು ಹೆಚ್ಚಾಗಿದ್ದು ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,19,59,680 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸೋಮವಾರದಂದು 13,94,573 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ 52,15,41,098 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ 64.05 ಕೋಟಿ ಕೋವಿಡ್ -19 ಲಸಿಕೆ ಡೋಸ್‌ಗಳನ್ನು ಮಂಗಳವಾರ ಬೆಳಗಿನವರೆಗೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ನೀಡಲಾಗಿದೆ.

350 ಹೊಸ ಸಾವುಗಳಲ್ಲಿ ಕೇರಳದಿಂದ 132, ಒಡಿಶಾದಿಂದ 67 ಮತ್ತು ಮಹಾರಾಷ್ಟ್ರದಿಂದ 52 ಮಂದಿ ಸೇರಿದ್ದಾರೆ.

ಈವರೆಗೆ ದೇಶದಲ್ಲಿ ಸಂಭವಿಸಿದ 4,38,560 ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ 1,37,20, ಕರ್ನಾಟಕದಲ್ಲಿ 37,293, ತಮಿಳುನಾಡಿನಲ್ಲಿ 34,899, ದೆಹಲಿಯಲ್ಲಿ 25,081, ಉತ್ತರ ಪ್ರದೇಶದಲ್ಲಿ 22,820, ಕೇರಳದಲ್ಲಿ 20,673 ಮತ್ತು ಪಶ್ಚಿಮ ಬಂಗಾಳದಲ್ಲಿ 18,434 ಸಾವುಗಳು ದಾಖಲಾಗಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights