ಐಪಿಎಸ್ ಅಧಿಕಾರಿ ವರ್ಟಿಕಾ ವಿರುದ್ಧ ಪತಿ ಗಂಭೀರ ಆರೋಪ : ತನಿಖೆಗೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ!
ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಅನುರಾಗ್ ತಿವಾರಿ ಜೊತೆ ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ಗೆ ಅನೈತಕ ಸಂಬಂಧವಿತ್ತು ಎಂದು ಪತಿ, ಐಎಫ್‌ಎಸ್ ಅಧಿಕಾರಿ ನಿತೀನ್ ಸುಭಾಶ್ ಗಂಭೀರ ಆರೋಪ ಮಾಡಿದ್ದಾರೆ.
ಪತಿಯ ವಿರುದ್ಧ ಆ್ಯಸಿಡ್ ದಾಳಿ, ಜೀವ ಬೆದರಿಕೆ ಹಾಕಿರುವುದಾಗಿ ಕಳೆದ ಜೂನ್‌ನಲ್ಲಿ ಆರೋಪಿಸಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಪತಿ, ಐಎಫ್‌ಎಸ್ ಅಧಿಕಾರಿ ನಿತೀನ್ ಸುಭಾಶ್ ಲೋಲಾ ಇದೀಗ ಗಂಭೀರ ಆಪಾದನೆ ಮಾಡಿದ್ದಾರೆ.
ತಿವಾರಿ ಮಾತ್ರವಲ್ಲ ಬೇರೊಬ್ಬರ ಜೊತೆ ವರ್ಟಿಕಾ ಸ್ನೇಹವಿತ್ತು ಎಂದು ಆರೋಪ ಮಾಡಿ ತನಿಖೆಗೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ನಿತೀನ್ ಸುಭಾಶ್ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಅನುಮತಿ ಪಡೆಯದೆ ಶ್ರೀಲಂಕಾ, ಅಫ್ಘಾನಿಸ್ತಾನ, ಸ್ವಿಟ್ಜರ್‌ಲ್ಯಾಂಡ್, ಆಸ್ಟ್ರಿಯಾ, ಇಟಲಿ ಸೇರಿದಂತೆ ವಿವಿಧ ದೇಶಕ್ಕೆ ಜೊತೆಯಲ್ಲಿ ಓಡಾಡಿದ್ದಾರೆ.
ವರ್ಟಿಕಾ ಕಟಿಯಾರ್ ಮಾನಸಿಕ ಖಿನ್ನತೆಗೆ ಆಕೆ ಒಳಗಾಗಿದ್ದಾಳೆ. ಜೊತೆಗೆ ಚಿಕಿತ್ಸೆ ಪಡೆಯುತ್ತಿದ್ದಾಳೆಮದು ನಿತೀನ್ ಆರೋಪಿಸಿದ್ದಾರೆ. ಆಕೆಗೆ ಯಾವುದಾದರು ಜವಬ್ದಾರಿ ವಹಿಸುವ ಮುನ್ನ ಯೋಚಿಸಿ ಎಂದು ನಿತೀನ್ ತಿಳಿಸಿದ್ದಾರೆ.
ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಈ ರೀತಿ ಮಾಡಿದ್ದಾರೆಂದು ವರ್ಟಿಕಾ ಪತಿ ಆರೋಪವನ್ನು ತಳ್ಳಿ ಹಾಕಿದ್ದಾರೆ.