FACT CHECK | ಮೋದಿ ಹೆಲಿಕಾಫ್ಟರ್‌ನಲ್ಲಿ ಇದ್ದ ನಿಗೂಢ ಪೆಟ್ಟಿಗೆ ಯಾವುದು ಗೊತ್ತೇ?

ನಿನ್ನೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್‌ನಿಂದ ನಿಗೂಢ ಪೆಟ್ಟಿಗೆಯೊಂದನ್ನು ಇಳಿಸಲಾಯ್ತು. ಅದರಲ್ಲಿ ಏನಿತ್ತು?’ ಎಂದು ಎಎಪಿ ನಾಯಕ ಬ್ರಿಜೇಶ್‌ ಕಾಳಪ್ಪ ಪ್ರಶ್ನಿಸಿ ಮಾಡಿದ್ದ ಫೇಸ್‌ ಬುಕ್ ಪೋಸ್ಟ್‌ನ ಸ್ಕ್ರೀನ್‌ ಶಾಟ್ ಒಂದು ವಾಟ್ಸಪ್‌ನಲ್ಲಿ ವೈರಲ್ ಆಗಿದೆ.

 

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ. ಈ ಪೋಸ್ಟ್‌ಅನ್ನು ನ್ಯೂಸ್‌ ಚೆಕ್ಕರ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 13 ಏಪ್ರಿಲ್‌, 2019ರ ಬ್ರಿಜೇಶ್ ಕಾಳಪ್ಪ ಅವರ ಫೇಸ್‌ಬುಕ್ ಪೋಸ್ಟ್ ಲಭ್ಯವಾಗಿದೆ.

ಬ್ರಿಜೇಶ್ ಕಾಳಪ್ಪ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ  ಪ್ರಶ್ನಿಸಿರುವ ಅವರು “ನಿನ್ನೆ ಚಿತ್ರದುರ್ಗದಲ್ಲಿ ಮೋದಿಯವರ ಹೆಲಿಕಾಪ್ಟರ್‌ನಿಂದ ನಿಗೂಢ ಪೆಟ್ಟಿಗೆಯನ್ನು ಇಳಿಸಲಾಯಿತು ಮತ್ತು ಅದನ್ನು ಖಾಸಗಿ ಇನ್ನೋವಾದಲ್ಲಿ ಲೋಡ್ ಮಾಡಲಾಗಿತ್ತು, ಅದು ವೇಗವಾಗಿ ಹೊರಟುಹೋಯಿತು. ಪೆಟ್ಟಿಗೆಯಲ್ಲಿ ಏನಿತ್ತು? EC ತನ್ನ ವಿಷಯಗಳನ್ನು ಏಕೆ ಪರಿಶೀಲಿಸಲಿಲ್ಲ? ಬಾಕ್ಸ್ ಭದ್ರತಾ ಪ್ರೋಟೋಕಾಲ್‌ನ ಭಾಗವಾಗಿರಲಿಲ್ಲ ಏಕೆ? ಆ ಇನ್ನೋವಾ ಪ್ರಧಾನಿಯವರ ಬೆಂಗಾವಲು ಪಡೆಯ ಭಾಗವಾಗಿರಲಿಲ್ಲ ಏಕೆ? ಚುನಾವಣಾ ಆಯೋಗವನ್ನು ತಪ್ಪಿಸಲು ಪ್ರಧಾನ ಮಂತ್ರಿಯವರೇ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಹಣವನ್ನು ಸಾಗಿಸುತ್ತಿದ್ದಾರೆಯೇ?!” ಎಂದಿದ್ದಾರೆ. ಈ ಪೋಸ್ಟ್ ನೊಂದಿಗೆ ಒಂದು ಕಪ್ಪು ಪೆಟ್ಟಿಗೆಯನ್ನು ಸಾಗಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ. ಏಪ್ರಿಲ್‌ 16, 2019ರ ಎನ್‌ಡಿಟಿವಿ ಮಾಡಿದ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ “ ರ‍್ಯಾಲಿಗೆ ತೆರಳುತ್ತಿದ್ದ ಪ್ರಧಾನಿ ಹೆಲಿಕಾಪ್ಟರ್ ನಲ್ಲಿ ಶಂಕಾಸ್ಪದಬಾಕ್ಸ್ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಆಗ್ರಹ” ಎಂದಿದೆ. ಈ ವರದಿಯಲ್ಲಿ ಚಿತ್ರದುರ್ಗದಲ್ಲಿ ಕಳೆದ ವಾರ ನಡೆದ ರಾಲಿ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಂದ ಕಾರಿಗೆ ಸಾಗಿಸಲಾದ ಬಾಕ್ಸ್ ಬಗ್ಗೆ ತನಿಖೆ ನಡೆಸಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಆಗ್ರಹಿಸಿದೆ ಎಂದಿದೆ.

Fact Check: ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎನ್ನುವ ಪೋಸ್ಟ್ ನಿಜವೇ?

ಏಪ್ರಿಲ್‌ 15, 2019ರ ವಿಜಯ ಕರ್ನಾಟಕ ವರದಿಯಲ್ಲಿ, “ಪ್ರಧಾನಿ ಹೆಲಿಕಾಪ್ಟರ್‌ನಲ್ಲಿ ಇದ್ದಿದ್ದು ಭದ್ರತೆಗೆ ಸಂಬಂಧಿಸಿದ ಪೆಟ್ಟಿಗೆ: ಚಿತ್ರದುರ್ಗ ಡಿಸಿ, ಎಸ್ಪಿ ಸ್ಪಷ್ಟನೆ” ಎಂದಿದೆ. ಪ್ರಧಾನಿ ಅವರ ಭದ್ರತೆ ಹಾಗೂ ಲಾಜಿಸ್ಟಿಕ್‌ಗೆ ಸಂಬಂಧಿಸಿದ ವಸ್ತುಗಳಿದ್ದ ಪೆಟ್ಟಿಗೆ ಅದಾಗಿತ್ತು. ಅದನ್ನು ಹೆಲಿಪ್ಯಾಡ್‌ನಿಂದ ವೇದಿಕೆಗೆ ತರಲಾಗಿತ್ತು. ನಂತರ ಅದನ್ನು ಮೈಸೂರಿಗೆ ಒಯ್ಯಲಾಯಿತು. ಹೆಲಿಪ್ಯಾಡ್‌ನಿಂದ ತಂದ ಪೆಟ್ಟಿಗೆಯನ್ನು ಇನೋವಾ ಕಾರಿನಲ್ಲಿ ತಂದು ಇರಿಸಲಾಗಿತ್ತು. ಅದು ಭದ್ರತೆಗೆ ಸಂಬಂಧಿಸಿದ ವಸ್ತುಗಳಿದ್ದ ಪೆಟ್ಟಿಗೆ ಎಂಬುದು ಖಾತ್ರಿಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಎಂದಿದೆ.

15 ಏಪ್ರಿಲ್  2019ರ ಪ್ರಜಾವಾಣಿ ವರದಿಯಲ್ಲಿ, “ಕಪ್ಪು ಪೆಟ್ಟಿಗೆ, ಹೆಲಿಕಾಪ್ಟರ್ ಪರಿಶೀಲಿಸಿಲ್ಲ: ಜಿಲ್ಲಾ ಚುನಾವಣಾಧಿಕಾರಿ” ಎಂದಿದೆ. ಚಿತ್ರದುರ್ಗದ ನರೇಂದ್ರ ಮೋದಿ ಸಮಾವೇಶಕ್ಕೆ ಕಪ್ಪು ಬಣ್ಣದ ಪೆಟ್ಟಿಗೆ ಹೊತ್ತು ಬಂದಿದ್ದ ಹೆಲಿಕಾಪ್ಟರ್ ಪರಿಶೀಲನೆ ಮಾಡಿಲ್ಲ. ಇದಕ್ಕೆ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಅವಕಾಶ ನೀಡಿರಲಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು. ಹೆಲಿಕಾಪ್ಟರ್ ಸೇರಿ ಎಲ್ಲ ವಾಹನ ತಪಾಸಣೆ ಮಾಡುವಂತೆ ವಿಚಕ್ಷಣಾ ದಳಕ್ಕೆ ಸೂಚನೆ ನೀಡಲಾಗಿತ್ತು. ಮೋದಿ ಅವರನ್ನು ಕರೆತಂದ ಹೆಲಿಕಾಪ್ಟರ್ ಪರಿಶೀಲಿಸಲು ಎಸ್‌ಪಿಜಿ ನಿರಾಕರಿಸಿತು. ಭಯೋತ್ಪಾದಕರಿಂದ ಜೀವ ಬೆದರಿಕೆ ಎದುರಿಸುತ್ತಿರುವ ರಾಜಕೀಯ ನಾಯಕರು ಹಾಗೂ ಪ್ರಧಾನಿ ಅವರ ಹೆಲಿಕಾಪ್ಟರ್ ತಪಾಸಣೆಗೆ ಚುನಾವಣಾ ಆಯೋಗ ವಿನಾಯಿತಿ ನೀಡಿರುವುದು ಬಳಿಕ ತಿಳಿಯಿತು ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು ಎಂದಿದೆ.

ಪ್ರಧಾನಿ ಮೋದಿ ಇತ್ತೀಚಿಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆಯೇ ಎಂದು ಪರಿಶೀಲಿಸಿದಾಗ. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಹೊರತು ಪಡಿಸಿ ಪ್ರಧಾನಿ ಮೋದಿ ಚಿತ್ರದುರ್ಗಕ್ಕೆ ಭೇಟಿ ನೀಡಿಲ್ಲ ಎಂದು ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ 14 ಏಪ್ರಿಲ್‌ 2024ರಂದು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮೈಸೂರು ಮತ್ತು ಮಂಗಳೂರಿಗೆ ಆಗಮಿಸಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡು 2019ರ ಹಳೆಯ ಘಟನೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 15 ಲಕ್ಷ ರೂಪಾಯಿ ಎಲ್ಲೋಯ್ತು? ಎಂದು ಹೇಳುವ ಅಮೀರ್ ಖಾನ್ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights