ಕೊರೊನಾದಿಂದ ಚೇತರಿಸಿಕೊಂಡವರಿಗೆ ಕಿಡ್ನಿ ಡಾಮೇಜ್ : ಅಧ್ಯಯನದಿಂದ ಭಯಾನಕ ಸತ್ಯ ಬಯಲು!
ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಮಾಹಾಮಾರಿ ಕೊರೊನಾ ಒಂದಿಲ್ಲಾ ಒಂದು ಆರೋಗ್ಯ ಸಮಸ್ಯೆಗಲನ್ನು ಉಂಟು ಮಾಡುತ್ತಲೇ ಇದೆ. ಹೌದು.. ಇತ್ತೀನ ವರದಿ ಪ್ರಕಾರ ಕೊರೊನಾದಿಂದ ಚೇತರಿಸಿಕೊಂಡವರಿಗೆ ಮೂತ್ರಪಿಂಡದ ಹಾನಿ (ಕಿಡ್ನಿ ಡಾಮೇಜ್)ಯಾಗುತ್ತಿರುವುದು ಕಂಡು ಬಂದಿದೆ.
ಅಮೆರಿಕದ ಸೊಸೈಟಿ ಆಫ್ ನೆಫ್ರಾಲಜಿಯ ಜರ್ನಲ್‌ನಲ್ಲಿ ನಡೆಸಿದ ಸಂಶೋಧನಾ ವರದಿ ಬುಧವಾರ ಬಿಡುಗಡೆಯಾಗಿದ್ದು ಭಯಾನಕ ಸತ್ಯ ಹೊರಬಿದ್ದಿದೆ. ಮನೆಯಲ್ಲಿ ಕೊರೊನಾವೈರಸ್‌ನಿಂದ ಚೇತರಿಸಿಕೊಳ್ಳುವ ಜನರಲ್ಲಿ ರಕ್ತ ಫಿಲ್ಟರಿಂಗ್ ಅಂಗಕ್ಕೆ ಗಾಯವಾಗುವ ಸಾಧ್ಯತೆ ಬಗ್ಗೆ ವರದಿ ಉಲ್ಲೇಖಿಸಿದೆ.
ಮಾತ್ರವಲ್ಲದೇ ಇದು ಕೋವಿಡ್‌ನ ತೀವ್ರತೆಯೊಂದಿಗೆ ಹೆಚ್ಚಾಗುತ್ತದೆ ಎಂದು ಅಧ್ಯಯನ ಕಂಡುಹಿಡಿದಿದೆ. ಯಾವುದೇ ಮೂತ್ರಪಿಂಡದ ತೊಂದರೆಗಳಿಲ್ಲದ ಆಸ್ಪತ್ರೆಯಲ್ಲಿಲ್ಲದ ರೋಗಿಗಳು ಸಹ ಕೋವಿಡ್ ಹೊಂದಿರದವರೊಂದಿಗೆ ಹೋಲಿಸಿದರೆ, ಮೂತ್ರಪಿಂಡದ ಕಾಯಿಲೆ ಉಂಟಾಗುವ ಅಪಾಯ ಎರಡು ಪಟ್ಟು ಹೆಚ್ಚಾಗಿರುತ್ತದೆ.
ಸಂಶೋಧನೆಯ ಪ್ರಕಾರ ಕೋವಿಡ್‌ನಿಂದ ಬದುಕುಳಿದ 1.7 ಮಿಲಿಯನ್‌ಗಿಂತಲೂ ಹೆಚ್ಚು ಜನರಲ್ಲಿ 89,216 ಜನ ಮೂತ್ರಪಿಂಡ-ಸಂಬಂಧಿತ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದು ಭಯಾನಕ ಸಂಗತಿ ಏನೆಂದರೆ ಮೂತ್ರಪಿಂಡದ ಸಮಸ್ಯೆಯ ಬಗ್ಗೆ ಯಾವುದೇ ಲಕ್ಷಣಗಳು ಇರುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ.