ಆಫ್ಘಾನಿಸ್ತಾನ್ ಆಕ್ರಮಿತ ತಾಲಿಬಾನಿಗಳಿಗೆ 230 ಕೋಟಿ ನೆರವು ಕೊಟ್ಟ ಚೀನಾ..!
ಚೀನಾ ಆಫ್ಘಾನಿಸ್ತಾನ್ ಆಕ್ರಮಿತ ತಾಲಿಬಾನಿಗಳ ಸರ್ಕಾರವನ್ನು ಹಾಡಿ ಹೊಗಳಿದ್ದು ಮಾತ್ರವಲ್ಲದೇ 230 ಕೋಟಿ ನೆರವು ಘೋಷಣೆ ಮಾಡಿದೆ.
ಹೌದು… ಚೀನಾ ಬುಧವಾರ ಅಫ್ಘಾನಿಸ್ತಾನಕ್ಕೆ 230 ಕೋಟಿ ನೆರವು ಘೋಷಿಸಿದೆ. ಅಫ್ಘಾನಿಸ್ತಾನದಲ್ಲಿ ನೆರೆಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳ ಮೊದಲ ಸಭೆಯಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವ ವಾಂಗ್ ಯಿ ತಾಲಿಬಾನಿಗಳಿಗೆ 230 ಕೋಟಿ ಮೌಲ್ಯದ ಧಾನ್ಯಗಳು, ಚಳಿಗಾಲದ ಆಹಾರ, ಲಸಿಕೆಗಳು ಮತ್ತು ಔಷಧಿಗಳನ್ನು ಅಗತ್ಯಗಳಿಗೆ ತಕ್ಕಂತೆ ನೀಡುವುದಾಗಿ ಹೇಳಿದ್ದಾರೆ.
ಪಾಕಿಸ್ತಾನ ಕರೆದ ಸಭೆಯಲ್ಲಿ ಅಫ್ಘಾನಿಸ್ತಾನದ ನೆರೆಯ ರಾಷ್ಟ್ರಗಳಾದ ಇರಾನ್, ತಜಕಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನ ವಿದೇಶಾಂಗ ಮಂತ್ರಿಗಳೂ ಭಾಗವಹಿಸಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಆತಿಥ್ಯ ವಹಿಸಿದ್ದರು.
ಮೊದಲ ಬ್ಯಾಚ್‌ನಲ್ಲಿ ಅಫ್ಘಾನ್ ಜನರಿಗೆ 3 ದಶಲಕ್ಷ ಲಸಿಕೆ ಡೋಸ್‌ಗಳನ್ನು ನೀಡಲು ಚೀನಾ ನಿರ್ಧರಿಸಿದೆ ಎಂದು ವಾಂಗ್ ಹೇಳಿದರು. ಚೀನಾ-ದಕ್ಷಿಣ ಏಷ್ಯಾ ರಾಷ್ಟ್ರಗಳ ತುರ್ತು ಪೂರೈಕೆ ಮೀಸಲು ಅಡಿಯಲ್ಲಿ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಸಾಂಕ್ರಾಮಿಕ-ವಿರೋಧಿ ಮತ್ತು ತುರ್ತು ವಸ್ತುಗಳನ್ನು ಒದಗಿಸಲು ಚೀನಾ ಸಿದ್ಧವಾಗಿದೆ.