ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಭೀಕರ ಅಪಘಾತ : ತಮಿಳುನಾಡು ಮೂಲದ ಯುವಕ-ಯುವತಿ ಸಾವು!
ಕಳೆದ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಕಾರು ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ತಮಿಳುನಾಡು ಮೂಲದ ಯುವಕ ಯುವತಿ ಸಾವನ್ನಪ್ಪಿದ್ಧಾರೆ.
ಕಳೆದ ರಾತ್ರಿ 9.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಶರವೇಗವಾಗಿ ಬರುತ್ತಿದ್ದ ಬಲೇನೋ ಕಾರು, ಫ್ಲೈ ಓವರ್ ಮೇಲೆ ಲೇಬೈ ಬಳಿ ನಿಂತಿದ್ದ ಜೋಡಿಗೆ ರಭಸವಾಗಿ ಗುದ್ದಿದೆ. ಗುದ್ದಿದ ರಬಸಕ್ಕೆ ತಮಿಳುನಾಡು ಮೂಲದ ಪ್ರೀತಮ್ ಮತ್ತು ಕೃತಿಕ ಫ್ಲೈ ಓವರ್ (130 ಅಡಿ ಎತ್ತರದಿಂದ) ಮೇಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಒಳಗಡೆ ರಕ್ತದ ಕಲೆಗಳು ಇದ್ದು ಡ್ರೈವರ್ ನಿತೇಶ ಮುಂದಿನ ಏರ್ ಭ್ಯಾಗ್ ಓಪನ್ ಆಗಿದೆ. ನಿತೇಶ್ ತಲೆಗೆ ಬಲವಾಗಿ ಪೆಟ್ಟು ಬಿದ್ದು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಗೂ ಮುನ್ನ ಸುಮಾರು ನೂರರಿಂದ ನೂರಿಪ್ಪತ್ತು ಕಿ.ಮೀ ವೇಗದಲ್ಲಿ ಡ್ರೈವರ್ ನಿತೇಶ ಚಲಾಯಿಸುತ್ತಿದ್ದು ಶರವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ರಾತ್ರಿ ವೇಳೆ ನೈಟ್ ಡ್ರೆಸ್ ನಲ್ಲಿ ಬುಲೇಟ್ ಬೈಕ್ನಲ್ಲಿ ಬಂದು ಧೂಮಪಾನಕ್ಕಾಗಿ ಬೈಕ್ ನಿಲ್ಲಿಸಿದ್ದ ಯುವಕ-ಯುವತಿ ಬೈಕ್ ಗೆ ಕಾರು ಗುದ್ದಿದೆ. ಗುದ್ದಿದ ರಬಸಕ್ಕೆ ಯುವಕ-ಯುವತಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಇಬ್ಬರು ಮೃತಪಟ್ಟಿದ್ದಾರೆ.
KA-01-MR-2802 ಬಲೇನೋ ಕಾರು ಹಾಗೂ ತಮಿಳು ನಾಡಿನ ನಂಬರ್ ಪ್ಲೇಟ್ ಹೊಂದಿರುವ (TN 01-BD-9218) ಬೈಕ್ ನಡುವೆ ಈ ಅಪಘಾತ ನಡೆದಿದೆ. ಸದ್ಯ ಈ ಜೋಡಿಯ ಗುರುತು ಪತ್ತೆ ಹಚ್ಚಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದು, ಕಾರು ಚಾಲಕ ಹೆಬ್ಬಗೋಡಿಯ ನಿತೇಶ್ ಮೇಲೆ 279, 304 ಎ ಪ್ರಕರಣ ದಾಖಲಿಸಿಕೊಂಡಿದ್ದಾರೆ.