ಶಾಲೆಯಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ; ಅಪರಾಧಿ ಮಹಿಳೆಗೆ 20 ವರ್ಷ ಜೈಲು!

ಹೈದರಾಬಾದ್‌ನ ಶಾಲೆಯೊಂದರಲ್ಲಿ ಕೇರ್‌ ಟೇಕರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಬಾಲಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ತ್ವರಿತ ವಿಶೇಷ ನ್ಯಾಯಾಲಯವು ಅಪರಾಧಿ ಮಹಿಳೆಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 20,000 ರೂ.ಗಳ ದಂಡವನ್ನು ವಿಧಿಸಿದೆ.

27 ವರ್ಷದ ಕೆ.ಜ್ಯೋತಿ ಎಂಬ ಮಹಿಳೆಯ ವಿರುದ್ದ ಸಂತ್ರಸ್ತ ಬಾಲಕ ನೀಡಿದ್ದ ದೂರನ ಆಧಾರ ಮೇಲೆ ಚಂದ್ರಾಯನಗುಟ್ಟಾ ಪೊಲೀಸರು ಮಹಿಳೆ ವಿರುದ್ಧ ಪೊಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ತನ್ನ ಮಗನ ಶರೀರದ ಮೇಲೆ ಸುಟ್ಟಗಾಯಗಳ ಗುರುತುಗಳು ಕಂಡು ಬಂದಿದ್ದು, ಈ ಬಗ್ಗೆ ಆತನನ್ನು ವಿಚಾರಿಸಿದಾಗ ಶಾಲೆಗೆ ಹೊಸದಾಗಿ ಬಂದಿರುವ ಕೇರ್ಟೇಕರ್ ತಾನು ಮೂತ್ರ ವಿಸರ್ಜನೆಗೆ ತೆರಳುತ್ತಿದ್ದಾಗ ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದಳು. ಪ್ರತಿಬಾರಿಯೂ ಆಕೆ ತನ್ನೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಳು. ಈ ವಿಷಯವನ್ನು ಯಾರಿಗಾದರೂ ಹೇಳಬಾರದು ಎಂದು ಬೆದರಿಸಿದ್ದಳು ಎಂದು ಬಾಲಕ ಹೇಳಿದ್ದಾನೆ.

ಸಿಗರೇಟಿನಿಂದ ಬಾಲಕನಿಗೆ ಸುಟ್ಟಿದ್ದಲ್ಲದೆ, ಆನತ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದು ಬಾಲಕನ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು. ಅಪರಾಧಿ ಮಹಿಳೆಗೆ ಈಗ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಅಭಿಮಾನಿಗೆ ಕಿರುಕುಳ ಆರೋಪ; ನಟಿ, ಬಿಜೆಪಿ ಮುಖಂಡೆ ವಿರುದ್ದ ದೂರು ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights